ಶನಿವಾರ, ಆಗಸ್ಟ್ 8, 2020
28 °C

ಫೇಸ್‌ಬುಕ್‌ ಬೇಕೇ, ಸೇನೆ ತೊರೆಯಿರಿ: ದೆಹಲಿ ಹೈಕೋರ್ಟ್‌ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸೇನಾ ನಿಯಮಗಳನ್ನು ಉಲ್ಲಂಘಿಸಿ ಫೇಸ್‌ಬುಕ್ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಖಾತೆ ತೆರೆಯುವಂತಿಲ್ಲ ಎಂದು ಸೇನೆಯ ಅಧಿಕಾರಿ ಲೆ.ಕ. ಪಿ.ಕೆ. ಚೌಧರಿ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ತಿಳಿಸಿದೆ. 

ಸಾಮಾಜಿಕ ಜಾಲತಾಣಗಳು ಸೇರಿದಂತೆ ಭದ್ರತೆಗೆ ಅಪಾಯವೊಡ್ಡುವ 87 ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವಂತೆ ಜೂನ್‌ 6ರ ಆದೇಶದಲ್ಲಿ ಸೇನೆಯು ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದ ಚೌಧರಿಗೆ ತೀಕ್ಷ್ಣ ಎಚ್ಚರಿಕೆ ನೀಡಿರುವ ಹೈಕೋರ್ಟ್, ಖಾತೆ ರದ್ದು ಮಾಡಲು ಸೂಚಿಸಿದೆ. ಇಲ್ಲವಾದರೆ ಹುದ್ದೆ ತೊರೆಯುವಂತೆ ಸಲಹೆ ನೀಡಿದೆ. 

‘ತಮ್ಮ ಫೇಸ್‌ಬುಕ್‌ ಖಾತೆಯ ದತ್ತಾಂಶ ಅಳಿಸಿಹಾಕಿದರೆ, ತಮ್ಮ ಸಂಪರ್ಕಗಳು ಮತ್ತು ಸ್ನೇಹಿತರನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಚೌಧರಿ ವಾದಿಸಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ‘ನೀವು ಮೊದಲು ಖಾತೆಯನ್ನು ಕಿತ್ತುಹಾಕಿ. ನೀವು ಸೇನೆಯ ಭಾಗ ಎಂಬುದನ್ನು ಮರೆಯಬೇಡಿ. ಒಂದು ವೇಳೆ ನೀಮಗೆ ಸೇನೆಗಿಂತ ಫೇಸ್‌ಬುಕ್‌ ತುಂಬಾ ಪ್ರಿಯವಾಗಿದ್ದರೆ, ಹುದ್ದೆಯಿಂದ ನಿರ್ಗಮಿಸಬಹುದು’ ಎಂದು ನ್ಯಾಯಪೀಠ ಹೇಳಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು