ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ: ಲೆ. ಗವರ್ನರ್ ಮುರ್ಮು ಹೇಳಿಕೆಗೆ ಚುನಾವಣಾ ಆಯೋಗ ಆಕ್ಷೇಪ

Last Updated 28 ಜುಲೈ 2020, 15:14 IST
ಅಕ್ಷರ ಗಾತ್ರ

ನವದೆಹಲಿ: ಸಂವಿಧಾನದ ಪ್ರಕಾರ ಚುನಾವಣೆಯ ವೇಳಾಪಟ್ಟಿಯನ್ನು ನಿರ್ಧರಿಸುವ ಅಧಿಕಾರಚುನಾವಣಾ ಆಯೋಗಕ್ಕೆ ಮಾತ್ರವೇ ಇದೆ ಎಂದು ಆಯೋಗ ಮಂಗಳವಾರ ತಿಳಿಸಿದೆ.

ಜಮ್ಮು ಕಾಶ್ಮೀರದಲ್ಲಿನ ಚುನಾವಣೆ ಮತ್ತು ಕ್ಷೇತ್ರ ಪುನರ್‌ ವಿಂಗಡಣೆ ಕುರಿತು ಅಲ್ಲಿನ ಲೆಪ್ಟಿನೆಂಟ್‌ ಗವರ್ನರ್‌ ಜಿ.ಸಿ. ಮುರ್ಮು ಅವರು ನೀಡಿದ ಹೇಳಿಕೆಗೆ ಪ್ರತಿಯಾಗಿ ಆಯೋಗ ಹೀಗೆ ಹೇಳಿದೆ.

ಸಂವಿಧಾನಿಕ ಚೌಕಟ್ಟನ್ನು ಮೀರಿ ಇಂತಹ ಹೇಳಿಕೆಯನ್ನು ಅಧಿಕಾರಿಗಳು ನೀಡುವುದು ಸೂಕ್ತವಲ್ಲ ಎಂದು ಆಯೋಗ ತಿಳಿಸಿದೆ.

ಆಯೋಗದ ಹಿರಿಯ ಅಧಿಕಾರಿಗಳು ಈ ಕುರಿತು ವಿವರವಾದ ಮೌಲ್ಯಮಾಪನ ನಡೆಸಿದ ನಂತರಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ದಿನಾಂಕ ನಿಗದಿಪಡಿಸುತ್ತಾರೆ.

ಒಂದು ಪ್ರದೇಶದ ಹವಾಮಾನ,ಪ್ರಾದೇಶಿಕ ಮತ್ತು ಸ್ಥಳೀಯ ಉತ್ಸವಗಳಲ್ಲಿ ಎದುರಾಗುವ ಸನ್ನಿವೇಶ ಸೇರಿದಂತೆ ಹಲವು ಅಂಶಗಳನ್ನು ಗಮನಿಸಿ ಚುನಾವಣೆಯ ದಿನಾಂಕವನ್ನು ನಿಗದಿ ಪಡಿಸಲಾಗುತ್ತದೆ. ಸೇನೆ ಮತ್ತು ರೈಲ್ವೆ ಬೋಗಿಗಳ ಲಭ್ಯತೆಗಳನ್ನು ಪರಿಗಣಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT