ಶುಕ್ರವಾರ, ಜುಲೈ 30, 2021
28 °C

ಮಹಿಳಾ ಪಂಚಾಯತ್ ಅಧಿಕಾರಿ ಆತ್ಮಹತ್ಯೆ: 6 ಮಂದಿ ವಿರುದ್ಧ ಎಫ್‌ಐಆರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಲಿಯಾ (ಉತ್ತರ ಪ್ರದೇಶ): ಮಹಿಳಾ ಪಂಚಾಯತ್ ಅಧಿಕಾರಿ ಆತ್ಮಹತ್ಯೆ ಪ್ರಕರಣದಡಿ ಆರು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದರು.

ಉತ್ತರ ಪ್ರದೇಶದ ಮನಿಯಾ ನಗರ ಪಂಚಾಯತ್‌ನಲ್ಲಿ ಮಹಿಳಾ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಮಣಿ ಮಂಜರಿ ರೈ(27) ಸೋಮವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ತಂದೆ ಇದು ಕೊಲೆ ಪ್ರಕರಣ ಎಂದು ದೂರಿದ್ದರು. 

ಈ ಸಂಬಂಧ ಮನಿಯಾರ್‌ ನಗರ ಪಂಚಾಯತ್‌ನ ಅಧ್ಯಕ್ಷ ಭೀಮ್‌ ಗುಪ್ತ, ಸಿಖ್ಖಂದರಪುರ ನಗರ ಪಂಚಾಯತ್‌ನ ಕಾರ್ಯನಿರ್ವಹಣಾಧಿಕಾರಿ ಸಂಜಯ್‌ ರಾವ್‌ ಸೇರಿದಂತೆ ಒಟ್ಟು ಆರು ಮಂದಿಯ ವಿರುದ್ಧ ಐಪಿಸಿ ಸೆಕ್ಷನ್‌ 306ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಸಂಜಯ್ ಯಾದವ್‌ ತಿಳಿಸಿದರು. 

ಮಣಿ ಮಂಜರಿ ಅವರು ಸೋಮವಾರ ರಾತ್ರಿ ಅವಾಜ್‌ ವಿಕಾಸ್‌ ಕಾಲೋನಿಯಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ಥಳದಲ್ಲಿ ದೊರೆತ ಮರಣ ಪತ್ರದಲ್ಲಿ ‘ವಂಚಿತಳಾಗಿದ್ದೇನೆ. ನಾನು ತಪ್ಪು ಕೆಲಸ ಮಾಡಬೇಕಾಗಿತ್ತು’ ಎಂದು ಬರೆಯಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು