ಗುರುವಾರ , ಸೆಪ್ಟೆಂಬರ್ 24, 2020
24 °C

ಅಸ್ಸಾಂ, ಬಿಹಾರದಲ್ಲಿ ಪ್ರವಾಹ ಸಂಕಷ್ಟದಲ್ಲಿ 46 ಲಕ್ಷಕ್ಕೂ ಹೆಚ್ಚು ಮಂದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ/ಪಟ್ನಾ : ಅಸ್ಸಾಂ ಮತ್ತು ಬಿಹಾರದಲ್ಲಿ ಪ್ರವಾಹದಿಂದ ಸುಮಾರು 46ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಕೊಂಚ ಸುಧಾರಿಸಿದೆ. 22 ಜಿಲ್ಲೆಗಳ 22.34 ಲಕ್ಷ ಜನ ಪ್ರವಾಹದಿಂದ ಬಾಧಿತರಾಗಿದ್ದು, ಸೋಮವಾರ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯು ಗೋಲಾಘಾಟ್‌ ಜಿಲ್ಲೆಯ ಬೋಕಾಖಾಟ್‌ನಲ್ಲಿ ನೆಲೆಸಿದ್ದರು. ಇದರೊಂದಿಗೆ ಅಸ್ಸಾಂನಲ್ಲಿ ಪ್ರಕೃತಿ ವಿಕೋಪದಿಂದ ಸತ್ತವರ ಸಂಖ್ಯೆಯು 129ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎಎಸ್‌ಡಿಎಂಎ) ತಿಳಿಸಿದೆ.

‘ಸೋಮವಾರ ಪ್ರವಾಹವು ಸ್ವಲ್ಪ ಮಟ್ಟಿಗೆ ತಗ್ಗಿದೆ. ಗೋಲಾಪರಾ (4.62 ಲಕ್ಷ), ಬಾರಪೇಟಾ (3.81 ಲಕ್ಷ) ಹಾಗೂ ಮೋರಿಗಾಂವ್‌ (3 ಲಕ್ಷ) ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಂದಿನ 24 ಗಂಟೆಗಳಲ್ಲಿ 97 ಮಂದಿಯನ್ನು ರಕ್ಷಿಸಲಾಗಿದೆ’ ಎಂದೂ ಎಎಸ್‌ಡಿಎಂಎ ಹೇಳಿದೆ.

ಬ್ರಹ್ಮಪುತ್ರ, ಧಾನ್ಸಿರಿ, ಜಿಯಾ ಭರಾಲಿ, ಕೋಪಿಲಿ, ಬೇಕಿ ಮತ್ತು ಖುಷಿಯಾರಾ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ. ಹೀಗಾಗಿ ಈ ನದಿ ತಟಗಳಲ್ಲಿ ಇರುವ ವಿವಿಧ ಸ್ಥಳಗಳು
ಜಲಾವೃತಗೊಂಡಿವೆ. 

ಸಂಕಷ್ಟದಲ್ಲಿ 24.5 ಲಕ್ಷ ಮಂದಿ: ಬಿಹಾರದಲ್ಲಿ ಪ್ರಹಾಹ ಹೆಚ್ಚಿದ್ದು, 11 ಜಿಲ್ಲೆಗಳ ಒಟ್ಟು 24.42 ಲಕ್ಷ ಮಂದಿ ತೊಂದರೆ
ಗೀಡಾಗಿದ್ದಾರೆ.

ದಾರ್‌ಭಾಂಗ ಜಿಲ್ಲೆಯಲ್ಲಿ (8.87 ಲಕ್ಷ) ಅತಿ ಹೆಚ್ಚು ಮಂದಿ ಪ್ರವಾಹದಿಂದ ಬಾಧಿತರಾಗಿದ್ದಾರೆ.

ಭಾರತೀಯ ವಾಯುಪಡೆಯು ಗೋಪಾಲ್‌ಗಂಜ್‌‌, ದಾರ್‌ಭಾಂಗ‌ ಜಿಲ್ಲೆಗಳಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಹೆಲಿಕಾಪ್ಟರ್ ಮೂಲಕ ಆಹಾರ ಧಾನ್ಯಗಳ ಪೊಟ್ಟಣ ವಿತರಿಸುವ ಕಾರ್ಯದಲ್ಲಿ ತೊಡಗಿಕೊಂಡಿತ್ತು. ಸೋಮವಾರ ಸಂಜೆ ಇದನ್ನು ನಿಲ್ಲಿಸಲಾಗಿದೆ.

ಮೂವರ ಸಾವು: ಉತ್ತರಾಖಂಡ ರಾಜ್ಯದ ಪಿಥೋರಗಢದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಭೂಕುಸಿತ ಉಂಟಾಗಿದ್ದು, ಮೂವರು ಮೃತಪಟ್ಟಿದ್ದಾರೆ.

ಬಾಂಗಪಾನಿ ವ್ಯಾಪ್ತಿಯ ಧಾಮಿಗಾಂವ್ ಗ್ರಾಮದ ಜವಾಹರ ಸಿಂಗ್‌ (30) ಮತ್ತು ಆತನ ತಾಯಿ ವೈಷ್ಣಾ ದೇವಿ (55) ಹಾಗೂ ಗುಂತಿ ಗ್ರಾಮದ ಜಯಂತಿ ದೇವಿ (37) ಅವರು ಮೃತರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು