ಬುಧವಾರ, ಆಗಸ್ಟ್ 4, 2021
23 °C

ಅಮೆರಿಕದ ಎನ್‌ಐಎಫ್‌ಎ ಹಂಗಾಮಿ ನಿರ್ದೇಶಕರಾಗಿ ಭಾರತೀಯ ಸಂಜಾತ ಡಾ. ಪರಾಗ್‌ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಭಾರತ ಮೂಲದ ವಿಜ್ಞಾನಿ ಡಾ. ಪರಾಗ್‌ ಚಿಟ್ನಿಸ್‌ ಅವರನ್ನು ಅಮೆರಿಕದ ಪ್ರತಿಷ್ಠಿತ‌ ನ್ಯಾಷನಲ್‌ ಇನ್‌ಸ್ಟಿಟ್ಯೂಶನ್‌ ಆಫ್‌ ಫುಡ್‌ ಆ್ಯಂಡ್‌ ಅಗ್ರಿಕಲ್ಚರ್‌ನ (ಎನ್‌ಐಎಫ್‌ಎ) ಹಂಗಾಮಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. 

ಈ ವರ್ಷದ ಆರಂಭದಲ್ಲಿ ಪರಾಗ್‌ ಅವರನ್ನು ಕಾರ್ಯಕ್ರಮಗಳ ಸಹಾಯಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ಅವರು 31 ವರ್ಷಗಳ ಕಾಲ ವೈಜ್ಞಾನಿಕ ಸಂಶೋಧಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಪರಾಗ್‌ ಅವರು ಮಹಾರಾಷ್ಟ್ರದ ಕೊಂಕಣ ಕೃಷಿ ವಿಶ್ವವಿದ್ಯಾಲಯದಲ್ಲಿ ಸಸ್ಯವಿಜ್ಞಾನದಲ್ಲಿ ಪದವಿಯನ್ನು ಪಡೆದರು. ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಿಂದ ಸ್ನಾತಕೋತರ ಪದವಿಯನ್ನು ಪೂರ್ಣಗೊಳಿಸಿದ ಅವರು, ಲಾಸ್‌ ಏಂಜಲೀಸ್‌‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್.‌‌ಡಿ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು