ಬುಧವಾರ, ಆಗಸ್ಟ್ 12, 2020
22 °C

ಚೀನಾ ಅತಿಕ್ರಮಣದ ಬಗ್ಗೆ ಸ್ಥಳೀಯ ಲಡಾಖಿಗಳ ಮಾತುಗಳನ್ನು ಆಲಿಸಿ: ರಾಹುಲ್‍

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 'ಲಡಾಖ್‍ನಲ್ಲಿ ಇರುವ ದೇಶಭಕ್ತ ಸ್ಥಳೀಯರು ಚೀನಾದ ಒಳನುಸುಳುವಿಕೆ ವಿರುದ್ಧ ಧ್ವನಿ ಎತ್ತಿದ್ದು, ನಮ್ಮ ಮಾತುಗಳನ್ನು ಆಲಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರುತ್ತಿದ್ದಾರೆ. ಅವರ ಎಚ್ಚರಿಕೆಯನ್ನು ಕಡೆಗಣಿಸಿದರೆ ಭಾರಿ ಬೆಲೆ ತೆರಬೇಕಾದಿತು' ಎಂದು ಕಾಂಗ್ರೆಸ್‍ ನಾಯಕ ರಾಹುಲ್‍ ಗಾಂಧಿ ಅವರು ಶನಿವಾರ ಎಚ್ಚರಿಸಿದ್ದಾರೆ.

ಚೀನಿಯರು ಭಾರತದ ಭೂ ಭಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಲಡಾಖ್‍ನ ಸ್ಥಳೀಯರು ಆರೋಪಿಸಿರುವುದಕ್ಕೆ ಸಂಬಂಧಿಸಿದ ಮಾಧ್ಯಮಗಳ ವರದಿಯನ್ನು ಅವರು ಟ್ವೀಟ್‍ನಲ್ಲಿ ಹಂಚಿಕೊಂಡಿದ್ದಾರೆ.

ಭಾರತದ ಹಿತದೃಷ್ಟಿಯಿಂದ ಲಡಾಖ್‍ನಲ್ಲಿರುವ ಈ ಸ್ಥಳೀಯರ ಮಾತುಗಳನ್ನು ದಯವಿಟ್ಟು ಆಲಿಸಿ ಎಂದೂ ರಾಹುಲ್‍ ಮನವಿ ಮಾಡಿದ್ದಾರೆ. ಚೀನಾ ಮತ್ತು ಭಾರತ ನಡುವಣ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಅವರು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು