ಭಾನುವಾರ, ಏಪ್ರಿಲ್ 11, 2021
33 °C

ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಗೂಂಡಾಗಳಿಗೆ ಶರಣಾಗಿದೆ: ಪ್ರಿಯಾಂಕಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಉತ್ತರಪ್ರದೇಶದ ಕಾನೂನು ಸುವ್ಯವಸ್ಥೆಯು ಗೂಂಡಾಗಳ ಮುಂದೆ ಶರಣಾಗಿದೆ, ರಾಜ್ಯದಲ್ಲಿ ಜನರು ಅಸುರಕ್ಷತೆಯ ಭಾವನೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

ಹಣ ಸುಲಿಗೆಗಾಗಿ ಕಾನ್ಪುರದ ಸಂಜೀತ್‌ ಯಾದವ್‌ ಎಂಬುವರನ್ನು ಅಪಕರಿಸಿದ್ದ ಗೂಂಡಾಗಳು, ಹಣ ಪಡೆದ ನಂತರವೂ ಅವರ ಹತ್ಯೆ ಮಾಡಿದ್ದರು. ಈ ಘಟನೆಯನ್ನು ಉಲ್ಲೇಖಿಸಿದ ಪ್ರಿಯಾಂಕಾ, ‘ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ರಸ್ತೆಯಲ್ಲಿರಲಿ, ಕಚೇರಿಯಲ್ಲಿರಲಿ ಅಥವಾ ಮನೆಯಲ್ಲೇ ಇರಲಿ, ಯಾರೊಬ್ಬರಲ್ಲೂ ಸುರಕ್ಷತೆಯ ಭಾವ ಇಲ್ಲದಾಗಿದೆ’ ಎಂದು ಕಿಡಿಕಾರಿದ್ದಾರೆ.

‘ಸಂಜೀತ್‌ ಯಾದವ್‌ ಅವರಿಂದ ಹಣವನ್ನು ಪಡೆದ ಪೊಲೀಸರು ಅದನ್ನು ಅಪಹರಣಕಾರರಿಗೆ ಒಪ್ಪಿಸಿದ್ದರು. ಅದಾದ ನಂತರವೂ ಸಂಜೀತ್‌ ಅವರ ಹತ್ಯೆಯಾಗಿದೆ. ರಾಜ್ಯದಲ್ಲಿ ಹೊಸ ಮಾದರಿಯ ‘ಗೂಂಡಾರಾಜ್‌’ ನಿರ್ಮಾಣವಾಗಿದೆ’ ಎಂದು ಪ್ರಿಯಾಂಕಾ ಆರೋಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು