ಬುಧವಾರ, ಆಗಸ್ಟ್ 4, 2021
22 °C

ಮಧ್ಯಪ್ರದೇಶ: 10ನೇ ತರಗತಿ ಪಾಸ್ ಮಾಡಿದ ಬಾಲಕಿಗೆ ಫ್ಲಾಟ್ ಉಡುಗೊರೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಇಂದೋರ್ (ಮಧ್ಯಪ್ರದೇಶ): ಫುಟ್‌‌ಪಾತ್‌‌ನಲ್ಲಿ ಜೀವನ ನಡೆಸುತ್ತಾ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡಿ ಪ್ರಥಮ ಸ್ಥಾನ ಪಡೆದ ಬಾಲಕಿಯೊಬ್ಬಳಿಗೆ ಸ್ಥಳೀಯ ಆಡಳಿತ ಆಕೆಯ ಸಾಧನೆಯನ್ನು ಶ್ಲಾಘಿಸಿ ಫ್ಲಾಟ್ ಒಂದನ್ನು ಉಡುಗೊರೆಯಾಗಿ ನೀಡಿದೆ.

ಇಂದೋರ್‌ನ ಕೂಲಿಕಾರ್ಮಿಕರ ಪುತ್ರಿ ಭಾರತಿ ಖಂಡೇಕರ್ ಎಂಬ ಬಾಲಕಿಯೇ ಸಾಧನೆ ತೋರಿದ ವಿದ್ಯಾರ್ಥಿನಿ.

ಈಕೆಯ ತಂದೆ ತಾಯಿ ಕೂಲಿ ಮಾಡಿ ರಸ್ತೆಯ ಫುಟ್‌ಬಾತ್‌ನಲ್ಲಿ ಜೀವನ ನಡೆಸುತ್ತಿದ್ದರು. ಆದರೆ, ಬಾಲಕಿ ಮಾತ್ರ ತಾನು ಓದಬೇಕೆಂದು ಸರ್ಕಾರಿ ಶಾಲೆ ಸೇರಿಕೊಂಡಳು. ಹೇಗೋ ಕಷ್ಟಪಟ್ಟು ತಂದೆ ತಾಯಿ ಮಗಳನ್ನು ಹತ್ತನೇ ತರಗತಿಯವರೆಗೂ ಶಾಲೆಗೆ ಕಳುಹಿಸಿ ಶಿಕ್ಷಣ ದೊರೆಯಲು ಅವಕಾಶ ಮಾಡಿಕೊಟ್ಟರು.

ಕೊರೊನಾ ನಡುವೆಯೂ ಈ ಬಾರಿ ನಡೆದ ಪರೀಕ್ಷೆಯಲ್ಲಿ ಭಾರತಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣಳಾಗಿದ್ದಾಳೆ. ಕೂಡಲೆ ಈ ವಿಷಯ ತಿಳಿದ ಸ್ಥಳೀಯ ನಗರಸಭೆ ಆಕೆಯನ್ನು ಪತ್ತೆ ಮಾಡಿ ಆಕೆಯ ಪೋಷಕರು ಹಾಗೂ ಆಕೆಗೆ ತನ್ನ ವ್ಯಾಪ್ತಿಯಲ್ಲಿರುವ ಫ್ಲಾಟ್ ಒಂದನ್ನು ಉಡುಗೊರೆಯಾಗಿ ನೀಡಿದೆ.

ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಭಾರತಿ ಖಂಡೇಕರ್, ನನ್ನನ್ನು ಪ್ರೋತ್ಸಾಹಿಸಿದ್ದಕ್ಕಾಗಿ ನನ್ನ ಪೋಷಕರಿಗೆ ನಾನು ಧನ್ಯವಾದ ಹೇಳುತ್ತೇನೆ. ನಮಗೆ ವಾಸಿಸಲು ಮನೆ ಇರಲಿಲ್ಲ, ನಾವು ಫುಟ್‌ಪಾತ್‌ನಲ್ಲಿದ್ದೆವು. ಈ ಮನೆಯನ್ನು ನಮಗೆ ಉಡುಗೊರೆಯಾಗಿ ನೀಡಿದ್ದಲ್ಲದೆ, ನಾನು ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಇದೆ. ನನ್ನ ಮುಂದಿನ ಶಿಕ್ಷಣವನ್ನು ಉಚಿತವಾಗಿ ನೀಡುವುದಾಗಿ ಹೇಳಿರುವ ಸ್ಥಳೀಯ ಆಡಳಿತಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬಾಲಕಿ ಹೇಳಿದ್ದಾಳೆ.
ನಗರಸಭೆಯ ಈ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು