ಗುರುವಾರ , ಆಗಸ್ಟ್ 5, 2021
21 °C

ಸ್ವಯಂ ಕ್ವಾರಂಟೈನ್‍ನಲ್ಲಿ ಕೇಂದ್ರ ಸಚಿವ, ಸಂಸದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ.ಜಿತೇಂದ್ರ ಸಿಂಗ್‍

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಘಟಕದ ಅಧ್ಯಕ್ಷರಿಗೆ ಕೋವಿಡ್-19 ದೃಢಪಟ್ಟ ಹಿಂದೆಯೇ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್‍ ಮತ್ತು ಬಿಜೆಪಿ ಹಿರಿಯ ಮುಖಂಡ ರಾಮ್‍ ಮಾಧವ್‍ ಸ್ವಯಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

ಇನ್ನೊಂದೆಡೆ, ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಖಾತರಿಯಾದ್ದರಿಂದ ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಅವರೂ ಸ್ವಯಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕದ ಅಧ್ಯಕ್ಷ ರವೀಂದರ್ ರೈನಾ ಜೊತೆಗೆ ಜಿತೇಂದ್ರ ಸಿಂಗ್ ಈಚೆಗೆ ಒಟ್ಟಿಗೇ ಪ್ರಯಾಣಿಸಿದ್ದರು. ರೈನಾ ಜೊತೆಗೆ ಕಳೆದ 48 ಗಂಟೆಗಳ ಹಿಂದೆ ಸಂಪರ್ಕಕ್ಕೆ ಬಂದಿದ್ದೆ ಎಂದು ರಾಮ್‍ ಮಾಧವ್ ಟ್ವೀಟ್ ಮಾಡಿದ್ದಾರೆ.

ರಾಜೀವ್ ಚಂದ್ರಶೇಖರ್ ಅವರು ಜುಲೈ10ರಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದರು. ‘ಸಮಿತಿಯ ಒಬ್ಬ ಸಿಬ್ಬಂದಿಗೆ ಕೋವಿಡ್‍ ದೃಢಪಟ್ಟಿದೆ. ನಾನೂ ಕ್ವಾರಂಟೈನ್‍ಗೆ ಒಳಗಾಗುತ್ತಿದ್ದೇನೆ’ ಎಂದು ಅವರು ಟ್ವೀಟ್ ಮಾಢಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್‍ ನಾಯಕರಾದ ಅಧೀರ್ ಚಂದನ್‍ ಚೌಧುರಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಸುಮಾರು 15 ಸಂಸದರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು