ಗುರುವಾರ , ಜೂನ್ 17, 2021
22 °C
ಮುಂಬೈನ ಜೆ.ಜೆ ಆಸ್ಪತ್ರೆ ವೈದ್ಯರಿಂದ ಅಭಿವೃದ್ಧಿ

ಕೊರೊನಾ ಸೋಂಕು ತಡೆಯುವ ರಕ್ಷಾ ‘ಕವಚ್‌‘

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ದಾದಿಯರು ಸೇರಿದಂತೆ ಎಲ್ಲ ವೈದ್ಯಕೀಯ ಸಿಬ್ಬಂದಿಯನ್ನು ಕೊರೊನಾ ಸೋಂಕಿನಿಂದ ರಕ್ಷಿಸುವುದಕ್ಕಾಗಿ ಇಲ್ಲಿನ ಜೆಜೆ ಆಸ್ಪತ್ರೆಯವರು ‘ಕವಚ್‌‘ ಎಂಬ ಹೊಸ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ.

ಇಂಡೋಮ್ಡ್‌ ಡಿವೈಸಸ್‌ ಕಂಪನಿ ಎಂಜಿನಿಯರ್‌ಗಳ ಸಹಾಯದೊಂದಿಗೆ ಆಸ್ಪತ್ರೆಯ ಜರ್ನಲ್ ಸರ್ಜರಿ ವಿಭಾಗದವರು ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.

ಕಡಿಮೆ ವೆಚ್ಚದಲ್ಲಿ ತಯಾರಾಗಿರುವ ಇದು ಒಂದು ಗಾಜಿನ ಕವಚದ ಟ್ರಾಲಿ (Glass Chamber Trolly). ಇದರ ಒಂದು ತುದಿಯಲ್ಲಿಎಚ್‌ಇಪಿಎ ಫಿಲ್ಟರ್‌ ಅಳವಡಿಸಲಾಗಿದೆ. ಈ ಫಿಲ್ಟರ್‌ 0.02 ಮೈಕ್ರಾನ್‌ಷ್ಟು ಸೂಕ್ಷ್ಮವಾಗಿರುವ ಕಣಗಳನ್ನು ತಡೆಯುತ್ತದೆ. ಸೋಂಕಿತ ವ್ಯಕ್ತಿಯನ್ನು ಈ ಕವಚದಲ್ಲಿಟ್ಟು ಸಾಗಿಸುವುದರಿಂದ ಸೋಂಕಿತರ ಸಂಪರ್ಕಕ್ಕೆ ಬರುವಂತಹ ಎಲ್ಲ ವೈದ್ಯಕೀಯ ಸಿಬ್ಬಂದಿಯನ್ನೂ ಸೋಂಕಿನಿಂದ ರಕ್ಷಿಸಬಹುದು‘ ಎನ್ನುತ್ತಾರೆ ಆಸ್ಪತ್ರೆಯ ಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಮೋಲ್ ವಾಘ್‌.

‘ಕವಚ‌ ಟ್ರಾಲಿ ಕೊರೊನಾ ಸೋಂಕು ಹರಡುವುದುನ್ನು ತಡೆಯುವ ಜತೆಗೆ, ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಕೋವಿಡ್‌  ರೋಗಿಗಳನ್ನು ಬೇರೆ ಸೋಂಕುಗಳಿಂದಲೂ ರಕ್ಷಿಸುತ್ತದೆ‘ ಎನ್ನುತ್ತಾರೆ ಈ ಸಾಧದ ಪರಿಕಲ್ಪನೆಯ ರೂವಾರಿ, ಆಸ್ಪತ್ರೆಯ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಅಜಯ್‌ ಭಂಡಾರ್‌ವರ್.

‘ಈ ಟ್ರಾಲಿಯ ಚೇಂಬರ್‌ ಒಳಗೇ ಕೋವಿಡ್‌ ಸೋಂಕಿತರನ್ನು ಸೊನೊಗ್ರಫಿಯಂತಹ ಪರೀಕ್ಷೆಗೆ ಒಳಪಡಿಸಬಹುದು‘ ಎನ್ನುವ ವಾಘ್‌, ಎಂಜಿನಿಯರ್‌ಗಳು ಆ ಚೇಂಬರ್ ಅನ್ನು ಆಂಬ್ಯುಲೆನ್ಸ್‌ಗಳಿಗೆ ಅಳವಡಿಸುವ ಪ್ರಯತ್ನದಲ್ಲಿದ್ದಾರೆ‘ ಎಂದು ತಿಳಿಸಿದರು.

ಪ್ರತಿ ದಿನ ಸಾವಿರಾರು ಆರೋಗ್ಯ ರಕ್ಷಕರು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇಂಥ ಸೋಂಕಿತ ಸಿಬ್ಬಂದಿಯನ್ನು ಅನಿವಾರ್ಯವಾಗಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಪರಿಣಾಮವಾಗಿ ರೋಗಿಗಳ ಸೇವೆಗೆ ವೈದ್ಯಕೀಯ ಸಿಬ್ಬಂದಿಯ ಕೊರತೆಯಾಗುತ್ತಿದೆ. ಜತೆಗೆ, ವೈದ್ಯಕೀಯ ಸಿಬ್ಬಂದಿ ದಿನಪೂರ್ತಿ ಪಿಪಿಇ ಕಿಟ್‌ ತೊಟ್ಟು ರೋಗಿಗಳನ್ನು ಆರೈಕೆ ಮಾಡುವುದು ಕಷ್ಟವಾಗುತ್ತಿದೆ. ಇಂಥ ಕಠಿಣ ಸಂದರ್ಭದಲ್ಲಿ, ಈ ‘ಕವಚ‘ ನಿಜಕ್ಕೂ ವೈದ್ಯಕೀಯ ಸಿಬ್ಬಂದಿಗೆ ರಕ್ಷಾಕವಚವಾಗಲಿದೆ ಎಂದು ವಾಘ್ ಅಭಿಪ್ರಾಯಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು