ಸೋಮವಾರ, ಮಾರ್ಚ್ 8, 2021
27 °C
ಕೈಸಾಂಗ್ ನಗರ ಸಂಪೂರ್ಣ ಲಾಕ್‌ಡೌನ್

ಉತ್ತರ ಕೊರಿಯಾದಲ್ಲಿ ಮೊದಲ ಕೊರೊನಾ ಸೋಂಕು ಶಂಕೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಸೋಲ್‌: ಉತ್ತರ ಕೊರಿಯಾದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಲಕ್ಷಣ ಪತ್ತೆಯಾಗಿದ್ದರಿಂದ ದಕ್ಷಿಣ ಕೊರಿಯಾ ಗಡಿಯ ಸಮೀಪವಿರುವ ಕೈಸಾಂಗ್ ನಗರವನ್ನು ಸಂ‍ಪೂರ್ಣ ಲಾಕ್‌ಡೌನ್‌ ಮಾಡಲಾಗಿದೆ.

ಒಂದುವೇಳೆ ಈ ವ್ಯಕ್ತಿಗೆ ಸೋಂಕು ತಗುಲಿರುವುದು ಅಧಿಕೃತವಾಗಿ ಘೋಷಣೆಯಾದರೆ, ಉತ್ತರ ಕೊರಿಯಾದಲ್ಲಿ ದೃಢಪಟ್ಟ ಮೊದಲ ಕೋವಿಡ್–19 ಪ್ರಕರಣ ಇದಾಗಲಿದೆ.

‘ಅಪಾಯಕಾರಿ ವೈರಸ್‌’ ದೇಶವನ್ನು ಪ್ರವೇಶಿಸಿರಬಹುದು ಎಂಬ ಆತಂಕ ಉತ್ತರಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರಿಗೆ‌ ಎದುರಾಗಿದೆ ಎಂದು ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.

‘ಕೆಲವು ವರ್ಷಗಳ ಹಿಂದೆ ದಕ್ಷಿಣ ಕೊರಿಯಾಕ್ಕೆ ಪರಾರಿಯಾಗಿದ್ದ ಈ ವ್ಯಕ್ತಿ ಕಳೆದ ವಾರ ಉತ್ತರ ಕೊರಿಯಾ ಗಡಿರೇಖೆಯನ್ನು ಅಕ್ರಮವಾಗಿ ಪ್ರವೇಶಿಸಿದ್ದಾನೆ ಎಂದು ಕೊರಿಯಾ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್‌ಎ) ವರದಿ ಮಾಡಿದೆ. 

ಸೋಂಕು ಶಂಕಿತ ವ್ಯಕ್ತಿ ಮತ್ತು ಆತನ ಜೊತೆ ಸಂಪರ್ಕ ಹೊಂದಿದವರನ್ನು ಐದು ದಿನಗಳಿಂದ ಕ್ವಾರಂಟೈನ್‌ ಮಾಡಲಾಗಿದೆ. 

ಉತ್ತರ ಕೊರಿಯಾದಲ್ಲಿ ವೈದ್ಯಕೀಯ ಸೌಲಭ್ಯಗಳು ಉತ್ತಮವಾಗಿಲ್ಲ. ಇಲ್ಲಿ ಸೋಂಕು ಹರಡಲು ಪ್ರಾರಂಭವಾದರೆ ಭೀಕರ ಪರಿಣಾಮ ಎದುರಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು