ಗುರುವಾರ , ಆಗಸ್ಟ್ 6, 2020
24 °C

ಮಾನವ ಹಕ್ಕುಗಳ ಮೇಲೆ ಕೋವಿಡ್ -19 ಪ್ರಭಾವ: ಅವಲೋಕನಕ್ಕೆ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಾನವ ಹಕ್ಕುಗಳ ಮೇಲೆ ಕೋವಿಡ್ -19 ಪ್ರಭಾವದ ಕುರಿತ ಅವಲೋಕನಕ್ಕಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಹನ್ನೊಂದು ಸದಸ್ಯರ ತಜ್ಞರ ಸಮಿತಿ ರಚಿಸಿದೆ. 

ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ.ಎಸ್.ರೆಡ್ಡಿ ಮತ್ತು ಹಕ್ಕುಗಳ ಕಾರ್ಯಕರ್ತ ಮಾಜಾ ದಾರುವಾಲಾ ಅವರು ಈ ಸಮಿತಿಯಲ್ಲಿದ್ದಾರೆ. ವಿಶೇಷವಾಗಿ ತಳ ಸಮುದಾಯದ ಹಾಗೂ ದುರ್ಬಲ ವರ್ಗದವರ ಮೇಲೆ ಲಾಕ್‌ಡೌನ್‌ನಿಂದಾದ ಪರಿಣಾಮಗಳ ಕುರಿತು ಸಮಿತಿ ಅಧ್ಯಯನ ನಡೆಸಲಿದೆ. 

ದೇಶ ಅಥವಾ ವಿದೇಶದ ಯಾವುದೇ ಭಾಗದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ, ಲಾಕ್‌ಡೌನ್‌ ಪರಿಸ್ಥಿತಿ ನಿರ್ವಹಣೆಗೆ ತೆಗೆದುಕೊಂಡಿರುವ ಉತ್ತಮ ಕ್ರಮಗಳನ್ನು ಗಮನಿಸಲಿರುವ ಸಮಿತಿಯು, ಆಯೋಗಕ್ಕೆ ವರದಿಯನ್ನು ನೀಡಲಿದೆ. ಸಮಿತಿ ನೀಡುವ ಶಿಫಾರಸುಗಳನ್ನು ಆಧರಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆಯೋಗವು ಸಲಹೆ ನೀಡಲಿದೆ.

 

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು