ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ ಸಂಯೋಜಕಿ ಅಮಲಾ ಶಂಕರ್‌ ನಿಧನ

Last Updated 24 ಜುಲೈ 2020, 8:03 IST
ಅಕ್ಷರ ಗಾತ್ರ

ಕೋಲ್ಕತ: ನೃತ್ಯಪಟು ಮತ್ತು ನೃತ್ಯ ಸಂಯೋಜಕಿ ಅಮಲಾ ಶಂಕರ್‌ ಅವರು ವಯೋಸಹಜ ಕಾಯಿಲೆಗಳಿಂದಾಗಿ ಶುಕ್ರವಾರ ಮುಂಜಾನೆ ನಿಧನ ಹೊಂದಿದರು. ಅವರಿಗೆ 101 ವರ್ಷವಾಗಿತ್ತು. ನಿದ್ದೆಯಲ್ಲಿದ್ದಾಗಲೇ ಅವರಿಗೆ ಹೃದಯಾಘಾತವಾಗಿತ್ತು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

90ರ ವಯಸ್ಸಿನವರೆಗೂ ಚಟುವಟಿಕೆಯಿಂದಲೇ ಇದ್ದ ಅಮಲಾ ಅವರು, ಕಲಾಕ್ಷೇತ್ರದ ಸಾಧನೆಗಾಗಿ ಪಶ್ಚಿಮ ಬಂಗಾಳ ಕೊಡಮಾಡುವ ‘ಬಂಗ ಭೂಷಣ’ ಪ್ರಶಸ್ತಿಯನ್ನು 2011ರಲ್ಲಿ ಪಡೆದಿದ್ದರು.

‘ಅಮಲಾ ಅವರ ನಿಧನದಿಂದ ನೃತ್ಯ ಕ್ಷೇತ್ರಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT