ಬುಧವಾರ, ಆಗಸ್ಟ್ 12, 2020
27 °C

ಈ ವರ್ಷ ಪಾಕ್‌ನಿಂದ 2,400ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಈ ವರ್ಷದ ಮೊದಲ ಆರು ತಿಂಗಳಲ್ಲಿ ಪಾಕಿಸ್ತಾನವು 2,400 ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ಈ ವರೆಗೆ 14 ಭಾರತೀಯರನ್ನು ಕೊಂದಿದೆ.

ಪೂರ್ವ ಲಡಾಖ್‌ನಲ್ಲಿ ಗಡಿಗೆ ಸಂಬಂಧಿಸಿದಂತೆ ಭಾರತ–ಚೀನಾ ಮಿಲಿಟರಿ ಸಂಘರ್ಷದಲ್ಲಿ ತೊಡಗಿರುವ ಸಂದರ್ಭದಲ್ಲೇ ನೆರೆಯ ಪಾಕಿಸ್ತಾನ ಸೇನೆಯಿಂದ ಕದನ ವಿರಾಮ ಉಲ್ಲಂಘನೆಯಂಥ ಪ್ರಸಂಗಗಳೂ ಹೆಚ್ಚಾಗಿ ಸಂಭವಿಸುತ್ತಿವೆ.

‘ಪಾಕಿಸ್ತಾನ ಸೈನಿಕರು ಮತ್ತು ಗಡಿ ಭದ್ರತಾ ಪಡೆಗಳು ಈ ವರ್ಷ 2,432 ಬಾರಿ ಗಡಿ ನಿಯಂತ್ರಣಾ ನಿಯಮ ಉಲ್ಲಂಘಿಸಿ, ಗಡಿ ರೇಖೆ ವಿಸ್ತರಿಸುವ ಪ್ರಯತ್ನಗಳನ್ನು ನಡೆಸಿದ್ದಾರೆ,’ ಎಂದು ಕೇಂದ್ರ ಸರ್ಕಾರದ ಮೂಲವೊಂದು ತಿಳಿಸಿದೆ.

ಎರಡೂ ದೇಶಗಳ ನಡುವೆ 2003ರಲ್ಲಿ ಏರ್ಪಟ್ಟಿರುವ ಕದನ ವಿರಾಮ ಒಪ್ಪಂದದ ಅಪ್ರಚೋದಿತ ಉಲ್ಲಂಘನೆಗೆ ಸಂಬಂಧಿಸಿದಂತೆ ಭಾರತವು ಪಾಕಿಸ್ತಾನಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ. ನುಸುಳುಕೋರರಿಗೆ, ಭಯೋತ್ಪಾದಕರಿಗೆ ನಿರಂತರ ಬೆಂಬಲ ನೀಡುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಪರಮ್ಜಿತ್ ಸಿಂಗ್ ಅವರು ತಮ್ಮ ಹಂತದ ಪಾಕಿಸ್ತಾನ ಸೇನೆಯ ಅಧಿಕಾರಿಗಳಿಗೆ ಭಾರತದ ಎಚ್ಚರಿಕೆ ಸಂದೇಶವನ್ನು ಮುಟ್ಟಿಸಿದ್ದಾರೆ. ಆದಾಗ್ಯೂ, ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಅಲ್ಲದೇ, ಭಯೋತ್ಪಾದಕರಿಗೆ ಅನುಕೂಲ ಮಾಡಿಕೊಡುವುದನ್ನೂ ನಿಲ್ಲಿಸಿಲ್ಲ ಎಂದು ಕೇಂದ್ರದ ಮೂಲಗಳು ತಿಳಿಸಿವೆ. ‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು