ಭಾನುವಾರ, ಆಗಸ್ಟ್ 1, 2021
26 °C

ಅಮಾನತುಗೊಂಡಿದ್ದ ಎಸ್‍ಐಯಿಂದ ರಕ್ಷಣೆ ಕೋರಿ 'ಸುಪ್ರೀಂ'ಗೆ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ:‌ ರೌಡಿ ಶೀಟರ್ ವಿಕಾಸ ದುಬೆಗೆ ಪ್ರಮುಖ ಮಾಹಿತಿ ಒದಗಿಸಿದ್ದ ಆರೋಪದ ಮೇಲೆ ಅಮಾನತಿಗೆ ಒಳಗಾಗಿ, ಸದ್ಯ ಬಂಧನದಲ್ಲಿರುವ ಪೊಲೀಸ್‍ ಅಧಿಕಾರಿ ಈಗ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ದುಬೆ ಮತ್ತು ಆತನ ಸಹಚರರ ವಿರುದ್ಧ ನಡೆದಂತೆ ಎನ್‍ಕೌಂಟರ್‍ ನಡೆಯಬಹುದು ಎಂಬ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಸಬ್‌ಇನ್‌ಸ್ಪೆಕ್ಟರ್‌ ಕೃಷ್ಣ ಕುಮಾರ್‌ ಶರ್ಮಾ ಪರವಾಗಿ ಅವರ ಪತ್ನಿ ಅರ್ಜಿ ಸಲ್ಲಿಸಿದ್ದು, ಕಾನೂನುಬಾಹಿರ ಮಾರ್ಗಗಳ ಮೂಲಕ ತನ್ನ ಪತಿಯನ್ನೂ ಇನ್ನಿಲ್ಲವಾಗಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಬಂಧಿಸಲು ಪೊಲೀಸರು ಬರುತ್ತಿದ್ದಾರೆ ಎಂಬ ಮಾಹಿತಿಯನ್ನು ದುಬೆಗೆ ರವಾನಿಸಿದ್ದ ಆರೋಪದ ಮೇಲೆ ಶರ್ಮಾ ಮತ್ತು ಇತರೆ ಮೂವರನ್ನು ಜುಲೈ 5ರಂದು ಅಮಾನತುಪಡಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು