ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬಿ ಮತ್ತು ಜಾಟ್‌ ದೈಹಿಕವಾಗಿ ಪ್ರಬಲ, ಆದರೆ ಕಡಿಮೆ ಬುದ್ಧಿ: ಬಿಪ್ಲಬ್‌ ದೇಬ್‌

ತ್ರಿಪುರದ ಮುಖ್ಯಮಂತ್ರಿ ಹೇಳಿಕೆಗೆ ಕಾಂಗ್ರೆಸ್ ಗರಂ
Last Updated 21 ಜುಲೈ 2020, 5:22 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬಿಗಳು ಮತ್ತು ಜಾಟ್‌ಗಳು ದೈಹಿಕವಾಗಿ ಸದೃಢರಾಗಿರುತ್ತಾರೆ ಆದರೆ ಬುದ್ಧಿ ಕಡಿಮೆ ಎಂದು ಹೇಳುವ ಮೂಲಕ ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್ ದೇಬ್ ಅವರು ವಿವಾದಕ್ಕೆ ಗುರಿಯಾಗಿದ್ದಾರೆ.ಬಂಗಾಳಿಗರನ್ನು ಬಹಳ ಬುದ್ಧಿವಂತರು ಎಂದು ಅವರು ಕರೆದಿದ್ದಾರೆ.

ಅಗರ್ತಲಾದ ಪ್ರೆಸ್‌ ಕ್ಲಬ್‌ನಲ್ಲಿ ಮಾತನಾಡಿದ ಅವರು, ಭಾರತದ ಪ್ರತಿಯೊಂದು ಸಮುದಾಯವು ಒಂದು ನಿರ್ದಿಷ್ಟ ಪ್ರಕಾರ ಮತ್ತು ಸ್ವಭಾವದಿಂದ ಗುರುತಿಸಿಕೊಂಡಿದೆ ಎಂದು ಹೇಳಿದ್ದಾರೆ.ಮುಖ್ಯಮಂತ್ರಿಯ ಹೇಳಿಕೆಯ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

'ಬಂಗಾಳ ಅಥವಾ ಬಂಗಾಳಿಗರಿಗೆ ಸಂಬಂಧಿಸಿದಂತೆ, ಗುಪ್ತಚರ ವಿಷಯದಲ್ಲಿ ಯೊರೊಬ್ಬರೂ ಸವಾಲೆಸೆಯಬಾರದು ಎಂದು ಹೇಳಲಾಗುತ್ತದೆ. ಬಂಗಾಳಿಗರನ್ನು ಬಹಳ ಬುದ್ಧಿವಂತರೆಂದು ಕರೆಯಲಾಗುತ್ತದೆ ಮತ್ತು ಅದೇ ಅವರ ಗುರುತು' ಎಂದು ಕ್ಲಿಪ್‌ನಲ್ಲಿ ದೇಬ್ ಹೇಳಿರುವುದು ಕೇಳಿಬಂದಿದೆ.

ನಾವು ಪಂಜಾಬ್ ಜನರ ಬಗ್ಗೆ ಮಾತನಾಡುವಾಗ, ಅವರು ಪಂಜಾಬಿ, ಸರ್ದಾರ್ ಎಂದು ಹೇಳುತ್ತೇವೆ. ಅವರು ಕಡಿಮೆ ಬುದ್ಧಿವಂತಿಕೆಯನ್ನು ಹೊಂದಿರಬಹುದು, ಆದರೆ ಬಹಳ ಪ್ರಬಲರಾಗಿದ್ದಾರೆ. ಯಾರೊಬ್ಬರು ಅವರನ್ನು ಶಕ್ತಿಯಿಂದ ಗೆಲ್ಲಲು ಸಾಧ್ಯವಿಲ್ಲ ಆದರೆ ಪ್ರೀತಿ ಮತ್ತು ವಾತ್ಸಲ್ಯದಿಂದ ಸಾಧ್ಯ. ಹರಿಯಾಣದಲ್ಲಿ ಹೆಚ್ಚಿನ ಸಂಖ್ಯೆಯ ಜಾಟ್‌ಗಳು ವಾಸಿಸುತ್ತಿದ್ದಾರೆ. ಹಾಗಾದರೆ ಜಾಟ್‌ಗಳ ಬಗ್ಗೆ ಜನರು ಏನು ಹೇಳುತ್ತಾರೆ? ಜಾಟ್‌ಗಳಿಗೆ ಬುದ್ಧಿ ಕಡಿಮೆ, ಆದರೆ ತುಂಬಾ ಆರೋಗ್ಯಕರವಾಗಿರುತ್ತಾರೆ. ಒಬ್ಬರು ಜಾಟ್‌ಗೆ ಸವಾಲು ಹಾಕಿದರೆ, ಅವನು ತನ್ನ ಮನೆಯಿಂದ ಬಂದೂಕನ್ನು ತರುತ್ತಾನೆ ಎಂದು ದೇಬ್ ತಿಳಿಸಿದ್ದಾರೆ.

ಸಮುದಾಯಗಳ ಕುರಿತು ಮುಖ್ಯಮಂತ್ರಿಯವರ ಹೇಳಿಕೆಯು 'ನಾಚಿಕೆಗೇಡು ಮತ್ತು ದುರದೃಷ್ಟಕರ' ಎಂದು ಕಾಂಗ್ರೆಸ್ ಬಣ್ಣಿಸಿದೆ.
ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ, ದೇಬ್ ಅವರು ಪಂಜಾಬ್‌ನ 'ಸಿಖ್ ಸಹೋದರರನ್ನು' ಮತ್ತು ಹರಿಯಾಣದ ಜಾಟ್ ಸಮುದಾಯವನ್ನು ಅವಮಾನಿಸಿದ್ದಾರೆ. ಇದು ಬಿಜೆಪಿಯ ಕೀಳರಿಮೆಯನ್ನು ತೋರಿಸುತ್ತದೆ.ಖಟ್ಟರ್ ಜಿ ಮತ್ತು ದುಶ್ಯಂತ್ ಚೌತಲಾ ಏಕೆ ಮೌನವಾಗಿದ್ದಾರೆ? ಮೋದಿ ಜಿ ಮತ್ತು ನಾಡಾಜಿ ಎಲ್ಲಿದ್ದಾರೆ? ಈ ಕುರಿತು ಕ್ಷಮೆಯಾಚಿಸಿ, ಕ್ರಮ ತೆಗೆದುಕೊಳ್ಳಿ' ಎಂದು ಒತ್ತಾಯಿಸಿದ್ದಾರೆ.

ತ್ರಿಪುರ ಮುಖ್ಯಮಂತ್ರಿ ಈ ಹಿಂದೆಯೂ ಕೂಡ ವಿವಾದಗಳನ್ನು ಸೃಷ್ಟಿಸಿದ್ದರು.

2018ರಲ್ಲಿ ಮಹಾಭಾರತದ ಕಾಲದಲ್ಲಿ ಅಂತರ್ಜಾಲ ಮತ್ತು ಉಪಗ್ರಹ ದೂರದರ್ಶನ ಅಸ್ತಿತ್ವದಲ್ಲಿತ್ತು ಎಂದು ಅವರು ಹೇಳಿದ್ದರು. 1997 ರಲ್ಲಿ ಡಯಾನಾ ಹೇಡನ್ 'ಮಿಸ್ ವರ್ಲ್ಡ್' ಆಗಿ ಕಿರೀಟಧಾರಣೆ ಮಾಡಿದ್ದನ್ನು ಪ್ರಶ್ನಿಸಿದ್ದರು ಮತ್ತು ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳು ಪ್ರಹಸನ ಎಂದು ಆರೋಪಿಸಿದರು.

ಮೊಘಲರು ಕಲೆ ಮತ್ತು ವಾಸ್ತುಶಿಲ್ಪಗಳನ್ನು 'ಬಾಂಬ್ ಸ್ಫೋಟಿಸುವ' ಮೂಲಕ ರಾಜ್ಯದ ಸಾಂಸ್ಕೃತಿಕ ಅದ್ಭುತಗಳನ್ನು ನಾಶಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಕಳೆದ ವರ್ಷ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT