ಬುಧವಾರ, ಆಗಸ್ಟ್ 10, 2022
24 °C

ಎಫ್‌ಎಂನಲ್ಲಿ ಶನಿವಾರ ಪ್ರಸಾರವಾಗಲಿದೆ ಸಂಸ್ಕೃತ ಸುದ್ದಿ ನಿಯತಕಾಲಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸಾಪ್ತಾಹಿಕ ಸುದ್ದಿ ನಿಯತಕಾಲಿಕೆಯ ಮೂರನೇ ಆವೃತ್ತಿಯು ಶನಿವಾರ ಆಲ್‌ ಇಂಡಿಯಾ ರೇಡಿಯೊದಲ್ಲಿ ಪ್ರಸಾರವಾಗಲಿದ್ದು, ಮಕ್ಕಳಿಂದ ಪಂಚತಂತ್ರ ಮತ್ತು ಗೀತಾ ಅವರ ಜನಪ್ರಿಯ ಜಾನಪದ ಕಥೆಗಳು ನಿರೂಪಣೆಗೊಳ್ಳಲಿದೆ. 

ಈ ಕಾರ್ಯಕ್ರಮದಲ್ಲಿ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಕುರಿತು ಮಾಹಿತಿ ನೀಡಲಿದ್ದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವ ಪ್ರತಾಪ್‌ ಚಂದ್ರ ಸಾರಂಗಿ ಭಾಗವಹಿಸಲಿದ್ದಾರೆ ಎಂದು ಎಐಆರ್‌ ಅಧಿಕೃತ ಹೇಳಿಕೆ ನೀಡಿದೆ. 

‘ಈ ಆವೃತ್ತಿಯಲ್ಲಿ ಪಂಚತಂತ್ರ ಕಥೆಗಳು, ಗೀತಾ ಅವರ ಜಾನಪದ ಕಥೆಗಳನ್ನು ಮಹಾರಾಷ್ಟ್ರ ಸಾಂಗ್ಲಿಯ ಶಾಲೆಯೊಂದರ ಮಕ್ಕಳು ಸಂಸ್ಕೃತದಲ್ಲಿ ನಿರೂಪಿಸಲಿದ್ದಾರೆ ಎಂದು ಹೇಳಲಾಗಿದೆ. 

ಸಾಮಾನ್ಯವಾಗಿ ಬಳಸುವ ಪದಗಳನ್ನು ಸಂಸ್ಕೃತದಿಂದ ಹಿಂದಿ ಮತ್ತು ಪಂಜಾಬಿ ಭಾಷೆಗೆ ‘ಏಕ್ ಭಾರತ್ ಶ್ರೇಷ್ಠ ಭಾರತ್’ ವಿಭಾಗದಲ್ಲಿ ಅನುವಾದಿಸಲಾಗುತ್ತದೆ ಎಂದು ತಿಳಿಸಲಾಗಿದೆ. 

ಸಂಸ್ಕೃತ ಸುದ್ದಿ ಪತ್ರಿಕೆಯ ಮೊದಲ ಆವೃತ್ತಿಯನ್ನು ಜುಲೈ 4 ರಂದು ಪ್ರಸಾರ ಮಾಡಲಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು