ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಬೋಧನೆ: ಗುರುರಾಜ ಕರಜಗಿ ಉಪನ್ಯಾಸ 27ರಂದು

Last Updated 23 ಜುಲೈ 2020, 19:32 IST
ಅಕ್ಷರ ಗಾತ್ರ

ಬೆಂಗಳೂರು: ವಿಜ್ಞಾನ ಬೋಧಿಸುವ ಸೃಜನಶೀಲ ಮಾರ್ಗಗಳ ಕುರಿತು ಅಕಾಡೆಮಿ ಆಫ್‌ ಕ್ರಿಯೇಟಿವ್‌ ಟೀಚಿಂಗ್‌ನ ನಿರ್ದೇಶಕ ಡಾ.ಗುರುರಾಜ ಕರಜಗಿ ಇದೇ 27ರಂದು ಆನ್‌ಲೈನ್‌ನಲ್ಲಿ ಉಪನ್ಯಾಸ ನೀಡಲಿದ್ದಾರೆ.

ವಿಜ್ಞಾನದ ಉಗಮ ಮತ್ತು ಉದ್ದೇಶ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಇದನ್ನು ಸೃಜನಶೀಲ ಮಾರ್ಗಗಳಲ್ಲಿ ಬೋಧಿಸುವುದು ಹೇಗೆ ಎಂಬುದರ ಕುರಿತು ಅಂದು ಸಂಜೆ 6ರಿಂದ 7ರವರೆಗೆ ವೆಬಿನಾರ್‌ನಲ್ಲಿ ಹೇಳಲಿದ್ದಾರೆ.

‘ತಾರೆ ಜಮೀನ್‌ ಪರ್‌’ ಸಂಸ್ಥೆಯು ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಕಲಬುರ್ಗಿಯ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.

ತಾರೆ ಜಮೀನ್‌ ಪರ್‌ ಸಂಸ್ಥೆಯ ಫೇಸ್‌ಬುಕ್‌ ಪೇಜ್‌ ಹಾಗೂ ಯೂಟ್ಯೂಬ್‌ ಚಾನೆಲ್‌ನಲ್ಲೂ ಕಾರ್ಯಕ್ರಮ ಪ್ರಸಾರವಾಗಲಿದೆ. ಸೀಮಿತ ಸಂಖ್ಯೆಯ ಶಿಕ್ಷಕರಿಗೆ ಅವಕಾಶವಿದ್ದು, ಪಾಲ್ಗೊಳ್ಳ ಬಯಸುವವರು https://tinyurl.com/tzpwebinar ಲಿಂಕ್‌ ಮೂಲಕ ಉಚಿತವಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ಮಾಹಿತಿಗೆ 99020–33946, 90350–13642 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT