ಸೋಮವಾರ, ಆಗಸ್ಟ್ 10, 2020
21 °C

ಹಣ್ಣಿನ ವಿಚಾರಕ್ಕೆ ಮಾರಾಟಗಾರನಿಗೆ ಗುಂಡಿಟ್ಟ ಭದ್ರತಾ ಸಿಬ್ಬಂದಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ನೋಯ್ಡಾ: ಮಾವಿನಹಣ್ಣಿನ ವಿಚಾರವಾಗಿ ಖೋಡಾ ಕಾಲೋನಿ ಬಳಿ ಹಣ್ಣು ಮಾರಾಟಗಾರನನ್ನು ಗುಂಡಿಕ್ಕಿದ ಆರೋಪದ ಮೇಲೆ ನೋಯ್ಡಾದ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ಮಾವಿನ ಹಣ್ಣಿನ ಬೆಲೆಯ ಬಗ್ಗೆ ಇಬ್ಬರ ನಡುವೆ ವಾದ ಉಂಟಾಗಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಆರೋಪಿಯು ಹಣ್ಣು ಮಾರಾಟಗಾರನಿಗೆ ಗುಂಡು ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಮಾರಾಟಗಾರನ ಕಾಲಿಗೆ ಗುಂಡು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಹೆಚ್ಚುವರಿ ಉಪ ಆಯುಕ್ತ ರಣ್‌ವಿಜಯ್ ಸಿಂಗ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು