ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ ಶಿಲಾನ್ಯಾಸ ಹಿನ್ನೆಲೆ: ಭಾರತ–ನೇಪಾಳ ಗಡಿಯಲ್ಲಿ ಕಟ್ಟೆಚ್ಚರ

ಅಯೋಧ್ಯೆಗೆ ಪ್ರಧಾನಿ ಭೇಟಿ, ಸ್ವಾತಂತ್ರ್ಯೋತ್ಸವದ ಹಿನ್ನೆಲೆ
Last Updated 30 ಜುಲೈ 2020, 8:43 IST
ಅಕ್ಷರ ಗಾತ್ರ

ಮಹಾರಾಜ್‌ಗಂಜ್‌: ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಮತ್ತು ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗಡಿಭಾಗಗಳಲ್ಲಿ ಪೊಲೀಸ್ ಮತ್ತು ಸಶಸ್ತ್ರ ಸೀಮಾಬಲ ತಂಡ ಕಟ್ಟೆಚ್ಚರವಹಿಸಿದೆ.

ಇಲ್ಲಿನ ಭಾರತ – ನೇ‍ಪಾಳದ ಗಡಿಭಾಗದ ವ್ಯಾಪ್ತಿಯಲ್ಲಿರುವ ಮಹಾರಾಜ್‌ಗಂಜ್‌, ಸಿದ್ಧಾರ್ಥನಗರ, ಸರಸ್ವತಿ ಮತ್ತು ಬಹರೈಚ್‌ನಂತಹ ಪ್ರದೇಶಗಳಲ್ಲಿ ಹೈ ಅಲರ್ಟ್‌ ಘೋಷಿಸಿದ್ದು,ಗಡಿಯಲ್ಲಿ ಓಡಾಡುವ ಅಪರಿಚಿತರ ಮೇಲೆ ನಿಗಾ ಇಡಲು ಸೂಚಿಸಿರುವುದಾಗಿ ಗೋರಖ್‌ಪುರ್ ವಲಯದ ಎಡಿಜಿಪಿ ದಾವಾ ಶೇರ್ಪಾ ತಿಳಿಸಿದ್ದಾರೆ.

‘ಗಡಿಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶ್ವಾನದಳದ ಜತೆಗೆ ಒಂದು ಮಹಿಳಾ ಯೋಧರ ತಂಡವನ್ನೂ ನಿಯೋಜಿಸಲಾಗಿದೆ. ಇಲ್ಲಿನ ಇಂಡಿಯಾ–ನೇಪಾಳ ಗಡಿಭಾಗದಲ್ಲಿರುವ ಸೊನೌಲಿ ಮತ್ತು ಟುಟಿಬರಿ ಔಟ್‌ಪೋಸ್ಟ್‌ಗಳಲ್ಲಿ ಲೋಹಪರಿಶೋಧಕಗಳನ್ನು ಅಳವಡಿಸಲಾಗಿದೆ’ ಎಂದು ಶೇರ್ಪಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT