ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ರೈಲು ನಿಲ್ದಾಣಗಳಿಗೆ ಮಾಜಿ ಸಿಎಂಗಳ ಹೆಸರು: ತಮಿಳುನಾಡು ಸರ್ಕಾರ ಘೋಷಣೆ

Last Updated 31 ಜುಲೈ 2020, 9:47 IST
ಅಕ್ಷರ ಗಾತ್ರ

ಚೆನ್ನೈ: ನಗರದ ಮೂರು ಮೆಟ್ರೊ ರೈಲು ನಿಲ್ದಾಣಗಳಿಗೆ ಮಾಜಿ ಮುಖ್ಯಮಂತ್ರಿಗಳ ಹೆಸರು ಇಡಲಾಗುವುದು ಎಂದು ತಮಿಳುನಾಡು ಸರ್ಕಾರ ಶುಕ್ರವಾರ ಘೋಷಿಸಿದೆ.

ಅಳಂದೂರು ನಿಲ್ದಾಣವನ್ನು ‘ಅರೈನಾರ್‌ ಅಣ್ಣಾ ಅಳಂದೂರು ಮೆಟ್ರೊ’, ಸೆಂಟ್ರಲ್‌ ನಿಲ್ದಾಣವನ್ನು ‘ಪುರಚ್ಚಿ ತಲೈವರ್ ಡಾ.ಎಂ.ಜಿ.ರಾಮಚಂದ್ರನ್‌ ಸೆಂಟ್ರಲ್‌ ಮೆಟ್ರೊ’ ಹಾಗೂ ಸಿಎಂಬಿಟಿ ನಿಲ್ದಾಣವನ್ನು ‘ಪುರಚ್ಚಿ ತಲೈವಿ ಜೆ.ಜಯಲಲಿತಾ ಸಿಎಂಬಿಟಿ ಮೆಟ್ರೊ’ ಎಂಬುದಾಗಿ ನಾಮಕರಣ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

‘ಉನ್ನತ ಮಟ್ಟದ ಸಮಿತಿಯ ಶಿಫಾರಸಿನಂತೆ ಈ ನಿಲ್ದಾಣಗಳಿಗೆ ಮರುನಾಮಕರಣದ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT