ಶುಕ್ರವಾರ, ಆಗಸ್ಟ್ 7, 2020
23 °C

ಲಖನೌ | ಲಂಚ ಪಡೆದು ‘ಕೊರೊನಾ ನೆಗೆಟಿವ್‌’ ವರದಿ ನೀಡಿದ ಆಸ್ಪತ್ರೆಯ ಪರವಾನಗಿ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಲಂಚ ಪಡೆದು ಕೊರೊನಾ ನೆಗೆಟಿವ್‌ ಎಂದು ಸುಳ್ಳು ವರದಿ ನೀಡಿದ ಆರೋಪದ ಮೇಲೆ ಮೀರಠ್‌ನ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.

ಆಸ್ಪತ್ರೆಯ ಸಿಬ್ಬಂದಿ ವ್ಯಕ್ತಿಯೊಬ್ಬರಿಂದ ₹2,500 ಲಂಚ ಪಡೆದು, ಸುಳ್ಳು ವರದಿಯನ್ನು ನೀಡಿರುವ ವಿಡಿಯೊ ಬಹಿರಂಗವಾಗಿದೆ.

ಆಸ್ಪತ್ರೆಯ ಪರವಾನಗಿಯನ್ನು ರದ್ದುಪಡಿಸಲಾಗಿದ್ದು, ಅದರ ವ್ಯವಸ್ಥಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

‘ಈ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ಸಂಬಂಧ ಹಲವು ಸುಳ್ಳು ವರದಿ ನೀಡಲಾಗಿದೆ ಎಂಬ ಮಾಹಿತಿ ಇದೆ. ಇ‌ದು ಗಂಭೀರವಾದ ವಿಷಯ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಆಸ್ಪತ್ರೆಯನ್ನು ಜಪ್ತಿ ಮಾಡಲಾಗುವುದು’ ಎಂದು ನಗರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

‘ಈ ವರದಿಯನ್ನು ನೀವು ಎಲ್ಲಿ ಬೇಕಾದರೂ ತೋರಿಸಬಹುದು. ಏಳು ದಿನಗಳವರೆಗೆ ಇದಕ್ಕೆ ಮಾನ್ಯತೆ ಇದೆ. ರೋಗಿಯನ್ನು ಕರೆತರುವ ಅಗತ್ಯವಿಲ್ಲ. ಒಂದು ವೇಳೆ ರೋಗಿಯನ್ನು ಕರೆದುಕೊಂಡು ಬಂದಾಗ ತಪಾಸಣೆ ನಡೆಸಿದರೆ, ಸೋಂಕು ದೃಢಪಟ್ಟ ವರದಿ ಬಂದರೆ... ಆಗ ಏನಾಗಬಹುದು?’ ಎಂದು ಸಿಬ್ಬಂದಿ ವ್ಯಕ್ತಿಯೊಬ್ಬರ ಜತೆ ನಡೆಸಿರುವ ಸಂಭಾಷಣೆ ವಿಡಿಯೊದಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು