ಭಾನುವಾರ, ಆಗಸ್ಟ್ 1, 2021
27 °C

ಕೋವಿಡ್–19 | ಉತ್ತರಾಖಂಡ್‌ನಲ್ಲಿ ಶೇ. 23ರಷ್ಟು ಕುಸಿದ ಚೇತರಿಕೆ ಪ್ರಮಾಣ

ಎಎನ್‌ಐ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್: ಉತ್ತರಾಖಂಡ್‌ ರಾಜ್ಯದಲ್ಲಿ ಕೋವಿಡ್–19 ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣವು ಕಳೆದ ಒಂದು ತಿಂಗಳಿನಲ್ಲಿ ಶೇ.23 ರಷ್ಟು ಕುಸಿದಿದೆ ಎಂದು ಅಲ್ಲಿನ ಸರ್ಕಾರವು ತಿಳಿಸಿದೆ.

ಒಂದು ತಿಂಗಳ ಹಿಂದೆ ಇಲ್ಲಿ ಚೇತರಿಕೆ ಪ್ರಮಾಣ ಶೇ.81ರಷ್ಟಿತ್ತು. ಅದು ಈಗ ಶೇ.58ಕ್ಕೆ ಇಳಿದಿದೆ.

‘ರಾಜ್ಯದಲ್ಲಿ ಕೋವಿಡ್–19 ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣವು ಇದೀಗ ಶೇ.58 ರಷ್ಟು ಇದೆ. ಕಳೆದ ತಿಂಗಳು ಶೇ. 81ರಷ್ಟು ಇತ್ತು. ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಕಾರಣವಾಗಿದೆ. ಕೋವಿಡ್–19 ಪರಿಸ್ಥಿತಿ ಮತ್ತು ಚೇತರಿಕೆ ಪ್ರಮಾಣವು ಮುಂದಿನ ದಿನಗಳಲ್ಲಿ ಸುಧಾರಣೆಯಾಗಲಿದೆ’ ಎಂದು ರಾಜ್ಯ ಕಾರ್ಯದರ್ಶಿ ಓಂ ಪ್ರಕಾಶ್‌ ಹೇಳಿದ್ದಾರೆ.

ಆರೋಗ್ಯ ಇಲಾಖೆ ಹೊರಡಿಸಿರುವ ಪ್ರಕಟಣೆ ಪ್ರಕಾರ, ಕೋವಿಡ್–19ನಿಂದಾಗಿ ಮೃತಪಟ್ಟವರ ಪ್ರಮಾಣವೂ ಏರಿಕೆಯಾಗಿದೆ. ಕಳೆದ ಒಂದು ವಾರದಲ್ಲಿ 21 ಸೋಂಕಿತರು ಮೃತಪಟ್ಟಿದ್ದಾರೆ. ಜುಲೈ 24ರ ವರೆಗೆ ರಾಜ್ಯದಲ್ಲಿ 62 ಮಂದಿ ಸಾವಿಗೀಡಾಗಿದ್ದರು. ಶನಿವಾರದ ವೇಳೆಗೆ ಸಾವಿನ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಇದುವರೆಗೆ 7,447 ಪ್ರಕರಣಗಳು ದೃಢಪಟ್ಟಿವೆ. 3,034 ಸಕ್ರಿಯ ಪ್ರಕರಣಗಳು ಇದ್ದು, 4,330 ಸೋಂಕಿತರು ಗುಣಮುಖರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು