ಶುಕ್ರವಾರ, ಏಪ್ರಿಲ್ 23, 2021
28 °C
`

ವರವರ ರಾವ್ ಜಾಮೀನು ಅರ್ಜಿಗೆ ಎನ್‌ಐಎ ವಿರೋಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ಸಾಮಾಜಿಕ ಹೋರಾಟಗಾರ ವರವರ ರಾವ್ ಅವರು ಜಾಮೀನಿಗೆ ಅನಾರೋಗ್ಯದ ಕಾರಣ ನೀಡಿರುವುದು ನೆಪ ಮಾತ್ರ. ಅವರು ವಯಸ್ಸು ಮತ್ತು ಕೋವಿಡ್-19 ಸಂದರ್ಭದ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ’ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಗುರುವಾರ ಬಾಂಬೆ ಹೈಕೋರ್ಟಿಗೆ ತಿಳಿಸಿತು.

ಎಲ್ಗಾರ್ ಪರಿಷತ್ -ಮಾವೋವಾದಿ ಸಂಪರ್ಕ ಆರೋಪದಡಿ ವರವರರಾವ್ ಅವರನ್ನು ಎನ್‍ಐಎ ಬಂಧಿಸಿದೆ. ವರವರರಾವ್ ಅವರ ಆರೋಗ್ಯ ಸ್ಥಿರವಾಗಿದೆ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಚಿಕಿತ್ಸೆ ಬೇಕಿಲ್ಲ ಎಂದೂ ಹೇಳಿದೆ.

81 ವರ್ಷದ ವರವರ ರಾವ್ ಅವರಿಗೆ ಕೋವಿಡ್-19 ತಗುಲಿರುವುದು ದೃಢಪಟ್ಟ ಮಾರನೇ ದಿನ, ಜುಲೈ 16ರಂದು ಈ ಕುರಿತು ಪ್ರಮಾಣಪತ್ರ ಸಲ್ಲಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು