ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಂಗಲ್‌ ಟೀ ವಾಲಾ ಪರಿಚಯಿಸಿದ 'ಆ್ಯಂಟಿ ಕೊರೊನಾ ಟೀ'!

Last Updated 23 ಜುಲೈ 2020, 3:10 IST
ಅಕ್ಷರ ಗಾತ್ರ

ವಾರಂಗಲ್‌: ಕೋವಿಡ್‌–19 ಸಾಂಕ್ರಾಮಿಕ, ಲಾಕ್‌ಡೌನ್‌ ನಡುವೆ ತೆಲಂಗಾಣದ ವಾರಂಗಲ್‌ನಲ್ಲಿ ಕೊರೊನಾಗೆ ಸಡ್ಡು ಹೊಡೆಯುವ ಟೀ ಜನಪ್ರಿಯಗೊಂಡಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನೈಸರ್ಗಿಕ ಪದಾರ್ಥಗಳನ್ನು ಬಳಸುತ್ತಿರುವುದರಿಂದ 'ಆ್ಯಂಟಿ ಕೊರೊನಾ ಟೀ' ಸ್ಥಳೀಯರನ್ನು ಸೆಳೆಯುತ್ತಿದೆ.

ಕೊರೊನಾ ವಿರುದ್ಧದ ಟೀಗೆ ಶುಂಠಿ, ಕಾಳು ಮೆಣಸು, ದಾಲ್ಚಿನ್ನಿ ಪುಡಿ ಸೇರಿದಂತೆ ಇತರೆ ನೈಸರ್ಗಿಕ ಪದಾರ್ಥಗಳನ್ನು ಬಳಸಲಾಗುತ್ತಿದೆ. 'ಈ ಮಿಶ್ರಣವು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ' ಎಂದು ಟೀ ಅಂಗಡಿಯ ಮಾಲೀಕ ಶಿವ ಹೇಳಿದ್ದಾರೆ. ಈ ಬಗ್ಗೆ ಎಎನ್‌ಐ ವರದಿ ಮಾಡಿದೆ.

'ದೇಹಕ್ಕೆ ಕೊರೊನಾ ವೈರಸ್‌ ಸೋಂಕು ತಗುಲುವುದನ್ನು ತಡೆಯಲು ಉತ್ತಮ ರೋಗ ನಿರೋಧಕ ಶಕ್ತಿ ಅವಶ್ಯಕವಾಗಿದೆ. ಹಾಗಾಗಿಯೇ ನಾವು ಈ ವಿಶೇಷ ಟೀ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದೇವೆ' ಎಂದಿದ್ದಾರೆ.

ಇದೊಂದು ಆಯುರ್ವೇದ ಮಿಶ್ರಣವಾಗಿದ್ದು, ಕೊರೊನಾ ವಿಶೇಷ ಟೀ ಮನುಷ್ಯನ ದೇಶದಲ್ಲಿ ರೋಗ ತಡೆಗಟ್ಟುವ ಶಕ್ತಿ ಹೆಚ್ಚಿಸುತ್ತದೆ ಎಂದು ಗ್ರಾಹಕ ಪ್ರಭಾಕರ್‌ ಅಭಿಪ್ರಾಯ ಪಟ್ಟಿದ್ದಾರೆ. ಹಾಲು, ಟೀ ಪುಡಿಯೊಂದಿಗೆ ಬೆರೆಸಲಾಗುವ ಮಿಶ್ರಣವು ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ. ನಾನು, ನನ್ನ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ನಿತ್ಯ ಮೂರು ಬಾರಿ ಇಲ್ಲಿಗೆ ಬಂದು ಟೀ ಸೇವಿಸುತ್ತೇನೆ ಎಂದು ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ತೆಲಂಗಾಣದಲ್ಲಿ ಒಟ್ಟು 46,274 ಕೋವಿಡ್‌ ದೃಢಪಟ್ಟ ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT