ಬುಧವಾರ, ಆಗಸ್ಟ್ 4, 2021
24 °C

Covid-19 World Update | ಸೋಂಕು 1.21 ಕೋಟಿಗೆ ಏರಿಕೆ, 70 ಲಕ್ಷ ಮಂದಿ ಗುಣಮುಖ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಪ್ರಪಂಚದಾದ್ಯಂತ ಗುರುವಾರ ಬೆಳಗಿನ ಜಾವದವರೆಗೆ 1.21 ಕೋಟಿ ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಈ ಸೋಂಕಿನಿಂದ ಚಿಕಿತ್ಸೆ ಪಡೆದು 70 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಆದರೆ, ಸಾವಿನ ಸಂಖ್ಯೆ 5.51 ಲಕ್ಷಕ್ಕೆ ಏರಿಕೆಯಾಗಿದೆ.

ಅಮೆರಿಕಾ, ಬ್ರೆಜಿಲ್, ಭಾರತ ದೇಶಗಳಲ್ಲಿ ಈ ಸೋಂಕು ತೀವ್ರ ಪರಿಣಾಮ ಬೀರಿದ್ದು, ಆರ್ಥಿಕ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗಿದೆ. ಈ ಸೋಂಕಿನಿಂದ 213 ರಾಷ್ಟ್ರಗಳಲ್ಲಿ ಜನರು ತೊಂದರೆಗೀಡಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಶುಶ್ರೂಷಕರ ಪ್ರಯತ್ನದಿಂದಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಬ್ರಿಟನ್‌ನಿಂದ ಕೋವಿಡ್ ರಿಕವರಿ ಪ್ಲಾನ್, ಮಿನಿ ಬಜೆಟ್

ಅಮೆರಿಕದಲ್ಲಿ 31 ಲಕ್ಷಕ್ಕೂ ಅಧಿಕ ಮಂದಿಗೆ ಈ ಸೋಂಕು ತಗುಲಿದ್ದು, 134, 862 ಮಂದಿ ಸಾವಿಗೀಡಾಗಿದ್ದಾರೆ. ಇದುವರೆಗೆ 13 ಲಕ್ಷಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ 17 ಲಕ್ಷ ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. 68,055 ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ. 11 ಲಕ್ಷಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ.

ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ ಇದುವರೆಗೆ 7.69 ಲಕ್ಷ ಮಂದಿಗೆ ಸೋಂಕು ತಗುಲಿದೆ. ಇದುವರೆಗೆ 21,144 ಮಂದಿ ಸಾವಿಗೀಡಾಗಿದ್ದಾರೆ. 4.76 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ರಷ್ಯಾ ಇದ್ದು ಇದುವರೆಗೂ 7ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, 10,667 ಮಂದಿ ಸಾವಿಗೀಡಾಗಿದ್ದಾರೆ. 4.72 ಲಕ್ಷ ಮಂದಿ ಗುಣಮುಖರಾಗಿದ್ದಾರೆ.


ಜುಲೈ 9ರ ಬೆಳಿಗ್ಗೆ 8.40ರ ಮಾಹಿತಿ. ಕೃಪೆ: worldometers.info

ಚೀನಾದಲ್ಲಿ ನಿಂತಿಲ್ಲ ಕೊರೊನಾ ಸೋಂಕು

2019ರಲ್ಲಿ ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಈ ಸೋಂಕಿಗೆ ಹಲವರು ಪ್ರಾಣಕಳೆದುಕೊಂಡರೂ ನಂತರದ ದಿನಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದು ಕೊರೊನಾ ಸೋಂಕು ನಿವಾರಿಸಿಕೊಂಡು ಈಗ 23ನೇ ಸ್ಥಾನದಲ್ಲಿದೆ. ಆದರೂ ಗುರುವಾರದ ವೇಳೆಗೆ 9 ಪ್ರಕರಣಗಳು ಹೊಸದಾಗಿ ವರದಿಯಾಗಿವೆ. ಒಟ್ಟು 143 ಕೋಟಿ ಜನಸಂಖ್ಯೆ ಹೊಂದಿರುವ ಚೀನಾದಲ್ಲಿ 83,581 ಮಂದಿ ಸೋಂಕು ತಗುಲಿದೆ. 4,634 ಮಂದಿ ಬಲಿಯಾಗಿದ್ದಾರೆ. 78,590 ಗುಣಮುಖರಾಗಿದ್ದಾರೆ.

ಪಾಕಿಸ್ತಾನದಲ್ಲಿ ಕೊರೊನಾ ಸೋಂಕು 2.37 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕಾಣಿಸಿಕೊಂಡಿದೆ. 4,922 ಮಂದಿ ಸಾವಿಗೀಡಾಗಿದ್ದಾರೆ. 1.40 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಸದ್ಯದ ಸ್ಥಿತಿಯಲ್ಲಿ 91,602 ಮಂದಿ ವಿವಿಧ ಆಸ್ಪತ್ರೆ ಹಾಗೂ ತಾತ್ಕಾಲಿಕ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೆಕ್ಸಿಕೋದಲ್ಲಿ 6,995 ಹೊಸ ಪ್ರಕರಣಗಳು ವರದಿಯಾಗಿವೆ. 782 ಮಂದಿ ಸಾವಿಗೀಡಾಗಿದ್ದಾರೆ. ದಕ್ಷಿಣ ಕೊರಿಯಾದಲ್ಲಿ 49 ಹೊಸ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ 13 ಹೊಸ ಪ್ರಕರಣ, ನ್ಯೂಜಿಲ್ಯಾಂಡ್ 3 ಪ್ರಕರಣ, ಜಮೈಕಾದಲ್ಲಿ 6 ಹೊಸ ಪ್ರಕರಣ, ಬಹಮಾಸ್‌‌ನಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು