ಕೊಪ್ಪಳ: ‘ಅಧಿಕಾರಿಗಳೇನು ಮೇಲಿನಿಂದ ಇಳಿದು ಬಂದವರಾ? ಸರ್ಕಾರ ವರ್ಗಾವಣೆ ಮಾಡಿದಲ್ಲಿಗೆ ಹೋಗಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಎ. ಶೆಟ್ಟಿ ಅವರಿಗೆ ಕೇವಲ 9 ತಿಂಗಳ ಅವಧಿಯಲ್ಲಿ ವರ್ಗಾವಣೆ ಆದೇಶ ನೀಡಿದ ಕ್ರಮವನ್ನು ವರದಿಗಾರರು ಪ್ರಶ್ನಿಸಿದಾಗ ‘9 ತಿಂಗಳಲ್ಲ, 9 ದಿನಗಳಲ್ಲೇ ಆದೇಶ ಕೊಟ್ಟರೂ ಹೋಗಬೇಕು’ ಎಂದರು.
‘ಅಧಿಕಾರಿಗಳು ಸರ್ಕಾರಕ್ಕಿಂತ ದೊಡ್ಡವರಲ್ಲ. ಅವರನ್ನು ನೀವು ಸುಮ್ಮನೆ ಹೀರೋ ಮಾಡುತ್ತಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಜನರನ್ನು ಕೆಡಿಸಿದ್ದೇ ನಮ್ಮಂಥ ರಾಜಕಾರಣಿಗಳು. ರಾಜಕೀಯ ಪಕ್ಷಗಳೇ ಜನರನ್ನು ಭ್ರಷ್ಟರನ್ನಾಗಿಸಿವೆ. ಜನ ಯಾವತ್ತೂ ಹಣ, ಜಾತಿ ಏನನ್ನೂ ಕೇಳುವುದಿಲ್ಲ' ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.