ಭಾನುವಾರ, ಸೆಪ್ಟೆಂಬರ್ 15, 2019
27 °C

ಅಕ್ರಮ ವಲಸೆ: 86 ಮಂದಿ ವಶ

Published:
Updated:

ಲಂಡನ್‌: ಫ್ರಾನ್ಸ್‌ನಿಂದ ಸಣ್ಣ ಬೋಟಿನಲ್ಲಿ ಕಾಲುವೆ ಮೂಲಕ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ 86 ಮಂದಿ ವಲಸಿಗರನ್ನು ಮಂಗಳವಾರ ಬ್ರಿಟಿಷ್‌ ಅಧಿಕಾರಿಗಳು ತಡೆದು ವಶಕ್ಕೆ ತೆಗೆದುಕೊಂಡಿದ್ದಾರೆ.

ಒಂದೇ ದಿನದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ನುಸುಳಿದ್ದವರನ್ನು ವಶಕ್ಕೆ ತೆಗೆದುಕೊಂಡಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅಕ್ರಮ ವಲಸಿಗರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಇವರು 8 ವಿವಿಧ ದೇಶಗಳಿಗೆ ಸೇರಿದವರಾಗಿದ್ದಾರೆ’ ಎಂದು ಬ್ರಿಟನ್‌ ಆಂತರಿಕ ಸಚಿವಾಲಯ ಹೇಳಿದೆ.

ಬ್ರಿಟಿಷ್‌, ಫ್ರಾನ್ಸ್‌ ಸಾಗರ ಭದ್ರತಾ ಪಡೆ ಜನವರಿಯಿಂದ ಈಚೆಗೆ ಸುಮಾರು 1,450 ವಲಸಿಗರನ್ನು ರಕ್ಷಿಸಿದ್ದಾರೆ.

 

Post Comments (+)