ಐದು ಹುಡುಗರಲ್ಲಿ ಒಬ್ಬರಂತೆ ವಿಶ್ವದಾದ್ಯಂತ 11.5 ಕೋಟಿ ಬಾಲ್ಯವಿವಾಹ: ಯುನಿಸೆಫ್‌

ಶುಕ್ರವಾರ, ಜೂನ್ 21, 2019
24 °C

ಐದು ಹುಡುಗರಲ್ಲಿ ಒಬ್ಬರಂತೆ ವಿಶ್ವದಾದ್ಯಂತ 11.5 ಕೋಟಿ ಬಾಲ್ಯವಿವಾಹ: ಯುನಿಸೆಫ್‌

Published:
Updated:

ನ್ಯೂಯಾರ್ಕ್‌: ವಿಶ್ವದಾದ್ಯಂತ 11.5 ಕೋಟಿ ಹುಡುಗರು ಬಾಲ್ಯವಿವಾಹ ಆಗಿದ್ದಾರೆ ಎಂದು ಯುನಿಸೆಫ್‌(ವಿಶ್ವ ಸಂಸ್ಥೆಯ ಮಕ್ಕಳ ನಿಧಿ) ಬಾಲ್ಯ ವಿವಾಹ ಕುರಿತಾಗಿ ನಡೆಸಿದ ವಿಶ್ಲೇಷಣೆಯಲ್ಲಿ ಹೇಳಿದೆ.

ಇವರಲ್ಲಿ ಐದು ಮಕ್ಕಳಲ್ಲಿ ಒಬ್ಬರು ಅಥವಾ 2.3 ಕೋಟಿ ಮಕ್ಕಳು ತಮ್ಮ 15ನೇ ವಯಸ್ಸಿಗಿಂತಲೂ ಮುಂಚಿತವಾಗಿ ವಿವಾಹವಾಗಿದ್ದಾರೆ ಎಂದು ವಿವರಿಸಿದೆ.

ವಿಶ್ವದ 82 ದೇಶಗಳ ಬಾಲ್ಯ ವಿವಾಹದ ಅಂಕಿ ಅಂಶಗಳನ್ನು ಅಧ್ಯಯನ ಮಾಡಿ ವಿಶ್ಲೇಷಿಸಿದ್ದು, ಸಹರಾ ಉಪಖಂಡ ಆಫ್ರಿಕಾ, ಲ್ಯಾಟಿನ್‌ ಅಮೆರಿಕ ಮತ್ತು ಕೆರಿಬಿಯನ್‌, ದಕ್ಷಿಣ ಏಷ್ಯಾ ಹಾಗೂ ಮಧ್ಯ ಏಷ್ಯಾ ಮತ್ತು ಪೆಸಿಫಿಕ್‌ನ ದೇಶಗಳು ಸೇರಿದಂತೆ ಜಗತ್ತಿನಾದ್ಯಂತ ಬಾಲ್ಯ ವಿವಾಹ ಪ್ರಚಲಿತದಲ್ಲಿದೆ ಎಂದು ಹೇಳಿದೆ.

ಬಾಲ್ಯ ಕಿತ್ತುಕೊಳ್ಳುತ್ತದೆ; ಬಹು ಬೇಗ ತಂದೆಯಾಗುತ್ತಾರೆ

’ಬಾಲ್ಯ ವಿವಾಹವು ಬಾಲ್ಯವನ್ನೇ ಕಿತ್ತುಕೊಳ್ಳುತ್ತದೆ' ಎಂದು ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಟ್ಟ ಫೋರ್‌ ಅಭಿಪ್ರಾಯಪಟ್ಟಿದ್ದಾರೆ.

‘ಇನ್ನೂ ಪ್ರೌಢಾವಸ್ಥೆಗೆ ತಲುಪದ ಮಕ್ಕಳೇ ದೊಡ್ಡವರ ಜವಾಬ್ದಾರಿಯನ್ನು ಚಿಕ್ಕ ವಯಸ್ಸಿನಲ್ಲಿಯೇ ಹೊರಬೇಕಾದ ಒತ್ತಡ ಉಂಟಾಗುತ್ತದೆ. ಬೇಗ ಮದುವೆಯಾಗುವ ಗಂಡುಮಕ್ಕಳು ಬೇಗನೇ ತಂದೆಯಾಗುತ್ತಾರೆ. ಅವರ ಶಿಕ್ಷಣ ಮೊಟಕಾಗಿ ಉದ್ಯೋಗ ಅವಕಾಶ ಕುಂಠಿತವಾಗುವುದರಿಂದ ಅವರ ಮೇಲೆ ಒತ್ತಡ ಹೆಚ್ಚಾಗುತ್ತದೆ’ ಎಂದು ಹೇಳಿದ್ದಾರೆ.

ಮಾಹಿತಿ ಪ್ರಕಾರ, ಮಧ್ಯ ಆಫ್ರಿಕನ್‌ ರಿಪಬ್ಲಿಕ್‌ನ ಗಂಡುಮಕ್ಕಳಲ್ಲಿ ಶೇಕಡಾ 28ರಷ್ಟು ಬಾಲ್ಯ ವಿವಾಹವಾಗಿದ್ದಾರೆ. ನಂತರದ ಸ್ಥಾನದಲ್ಲಿ ನಿಕರಾಗುವಾ ಶೇ 19ರಷ್ಟು ಮತ್ತು ಮಡಗಾಸ್ಕರ್‌ ಶೇ 13ರಷ್ಟು ಬಾಲ್ಯ ವಿವಾಹ ಆಗಿರುವ ಬಗ್ಗೆ ಮಾಹಿತಿ ದೊರೆತಿದೆ.

ಬಾಲ್ಯವಿವಾಹ ಹೆಚ್ಚಾಗಿರುವ ಜಗತ್ತಿನ ಮೊದಲ 10 ರಾಷ್ಟ್ರಗಳ ಪಟ್ಟಿಯಲ್ಲಿ ನೇಪಾಳ ಸೇರಿದೆ. ಹತ್ತನೇ ಸ್ಥಾನ ಪಡೆದಿರುವ ನೇಪಾಳವು ಹುಡುಗರು ಮತ್ತು ಹುಡುಗಿಯರ ಬಾಲ್ಯ ವಿವಾಹ ಪದ್ಧತಿ ಹೊಂದಿರುವ ದಕ್ಷಿಣ ಏಷ್ಯಾದ ಏಕೈಕ ದೇಶವಾಗಿದೆ.  

ಹೊಸ ಅಂದಾಜಿನ ಪ್ರಕಾರ, ಒಟ್ಟಾರೆ ವಿಶ್ವದಲ್ಲಿ ಬಾಲ ವಧು ಮತ್ತು ಬಾಲ ವರಗಳ ಸಂಖ್ಯೆ 76.5 ಕೋಟಿ ತಲುಪುತ್ತದೆ. ಹುಡುಗಿಯರ ಪೈಕಿ 20ರಿಂದ 24ನೇ ವಯಸ್ಸಿನ ಐದು ಯುವತಿಯರಲ್ಲಿ ಒಬ್ಬರು ತಮ್ಮ 18ನೇ ವರ್ಷದ ಹುಟ್ಟು ಹಬ್ಬಕ್ಕೂ ಮೊದಲು ವಿವಾಹವಾಗಿದ್ದಾರೆ. 30 ಯುವಕರಲ್ಲಿ ಒಬ್ಬರು ಈ ಸಂಖ್ಯೆಗೆ ಹೋಲಿಸಿದರೆ ಬಾಲಕಿಯರ ಸಂಖ್ಯೆ ಕಡಿಮೆ ಇದೆ.

ಬಾಲಕಿಯರ ಬಾಲ್ಯ ವಿವಾಹ, ಅದಕ್ಕೆ ಕಾರಣಗಳು ಮತ್ತು ಪ್ರಭಾಗಳ ಕುರಿತು ವ್ಯಾಪಕವಾಗಿ ಅಧ್ಯಯನ ಮಾಡಲಾಗಿದ್ದರೂ, ಹುಡುಗರ ಬಾಲ್ಯ ವಿವಾಹ ಕುರಿತಾದ ವಿಷಯದಲ್ಲಿ ಹೆಚ್ಚಿನ ಮಾಹಿತಿಗಳು ಹೊರಬಂದಿವೆ. ಆದಾಗ್ಯೂ, ಬಾಲ್ಯವಿವಾಹ ಎಂಬ ಅಪಾಯಕ್ಕೆ ಒಳಗಾಗುವ ಮಕ್ಕಳು ಬಡ ಕುಟುಂಬದವರೇ ಹೆಚ್ಚು. ಗ್ರಾಮೀಣ ಪ್ರದೇಶದವರಾಗಿದ್ದು, ಯಾವುದೇ ಬಗೆಯ ಶಿಕ್ಷಣ ಹೊಂದಿಲ್ಲ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !