ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಕುಸಿತ: ಬದುಕುಳಿದ ಬಾಲಕಿ

Last Updated 16 ಜನವರಿ 2020, 20:00 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ : ತೀವ್ರ ಹಿಮಪಾತಕ್ಕೆ ತುತ್ತಾಗಿರುವ ಪಾಕ್‌ ಆಕ್ರಮಿತ ಕಾಶ್ಮೀರ
ದಲ್ಲಿ (ಪಿಒಕೆ) ಸತತ 18 ಗಂಟೆಗಳವರೆಗೆ ಹಿಮದಲ್ಲಿ ಸಿಲುಕಿದ್ದ 12 ವರ್ಷದ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ಬುಧವಾರ ರಕ್ಷಿಸಿದೆ. ನೀಲಂ ಕಣಿವೆ ವ್ಯಾಪ್ತಿಯಲ್ಲಿ ಸುರಿದ ಭಾರಿ ಹಿಮಪಾತದಿಂದ ಅಲ್ಲಿನ ಮೂರು ಮಹಡಿಯ ಕಟ್ಟಡವೊಂದು ಹಿಮದಿಂದ ಆವೃತವಾಗಿತ್ತು. ಅದರಲ್ಲಿ ಬಾಲಕಿ ಸಮೀನಾ ಸಿಲುಕಿದ್ದಳು.‌

‘ಪವಾಡ ಸದೃಶ ರೀತಿಯಲ್ಲಿ ಸಮೀನಾ ಬದುಕುಳಿದಿದ್ದಾಳೆ’ ಎಂದು ಆಕೆಯ ತಾಯಿ ಶಹ
ನಾಜ್‌ ತಿಳಿಸಿದ್ದಾರೆ. ಈ ದುರಂತದಲ್ಲಿ ಶಹನಾಜ್‌ರ ಮತ್ತೊಬ್ಬ ಮಗಳು ಮತ್ತು ಮಗ ಸತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT