ಹುಮ ನಗರದ ಮೇಲೆ ಶಂಕಿತ ರಾಸಾಯನಿಕ ದಾಳಿ: 21 ಜನ ಆಸ್ಪತ್ರೆಗೆ ದಾಖಲು

ಗುರುವಾರ , ಏಪ್ರಿಲ್ 25, 2019
26 °C

ಹುಮ ನಗರದ ಮೇಲೆ ಶಂಕಿತ ರಾಸಾಯನಿಕ ದಾಳಿ: 21 ಜನ ಆಸ್ಪತ್ರೆಗೆ ದಾಖಲು

Published:
Updated:

ಹುಮಾ: ನಗರದ ಮೇಲೆ ಶುಕ್ರವಾರ ನಡೆದ ಶೆಲ್ ದಾಳಿಯಲ್ಲಿ 21 ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ಅಲ್‌ ಶುಕೈಲಿಭಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯಲ್ಲಿ ರಾಸಾಯನಿಕ ಅಸ್ತ್ರಗಳು ಬಳಿಸಿರುವುದರ ಬಗ್ಗೆ ಸ್ಥಳೀಯ ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿವೆ.

ವಿಷಯುಕ್ತ ಅನಿಲ ಬಳಕೆಯಿಂದಾಗಿ ಸಂತ್ರಸ್ಥರು ಉಸಿರಾಟಕ್ಕೆ ಸಂಭಂದಿಸಿದ ಕಾಯಿಲೆಗಳಿಗೆ ತುತ್ತಾಗಿದ್ದಾರೆ ಎಂದು ‘ಸ್ಫುಟ್ನಿಕ್’ ಜಾಲತಾಣ ವರದಿ ಮಾಡಿದೆ.

ರಷ್ಯಾ ಮತ್ತು ಟರ್ಕಿ ಅಧ್ಯಕ್ಷರು ಕಳೆದ ವರ್ಷ ಹುಮಾ ನಗರವನ್ನು ಮಿಲಿಟರಿ ಮುಕ್ತ ವಲಯವಾಗಿಸುವ ಬಗ್ಗೆ ಚರ್ಚೆ ನಡೆಸಿದ್ದರು. ಸಿರಿಯಾದ ನಾಗರಿಕ ಯುದ್ಧದಲ್ಲಿ ರಾಸಾಯನಿಕ ಅಸ್ತ್ರಗಳು ಬಳಕೆಯಾದ ಬಗ್ಗೆ ಇರುವ ಅನುಮಾನವನ್ನು ಈ ಘಟನೆಯು ಪುಷ್ಟೀಕರಿಸುತ್ತದೆ. ಸಿರಿಯಾ ಸೇನೆಯ ಈ ನಡೆಯು ಅಂತರರಾಷ್ಟ್ರೀಯ ಸಮುದಾಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಸಿರಿಯಾದ ಸೇನೆಯು ಇಸ್ಲಾಮಿಕ್ ಸ್ಟೇಟ್ ಉಗ್ರರ ಕೊನೆಯ ಅಡಗುತಾಣವಾದ ಬಗೌಜ್‌ ಗ್ರಾಮವನ್ನು ವಶಪಡಿಸಿಕೊಂಡು ಸಿರಿಯಾವನ್ನು ಇಸ್ಲಾಮಿಕ್‌ ಸ್ಟೇಟ್‌ ಭಯೋತ್ಪಾದಕರಿಂದ ಮುಕ್ತಗೊಳಿಸಿರುದಾಗಿ ಶನಿವಾರವಷ್ಟೇ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !