ಅಮೆರಿಕದಲ್ಲಿ ಶೂಟೌಟ್‌: ಭಾರತೀಯ ಸೇರಿ ಮೂವರ ಸಾವು

7

ಅಮೆರಿಕದಲ್ಲಿ ಶೂಟೌಟ್‌: ಭಾರತೀಯ ಸೇರಿ ಮೂವರ ಸಾವು

Published:
Updated:

ಚಿಂಚಿನಾಟಿ (ಅಮೆರಿಕ): ಇಲ್ಲಿನ ಫೌಂಟೇನ್ ಸ್ಕ್ವೇರ್ ಕಟ್ಟಡ ಸಮೀಪದ ಖಾಸಗಿ ಬ್ಯಾಂಕೊಂದರ ಪ್ರಧಾನ ಕಚೇರಿ ಆವರಣದಲ್ಲಿ ಅಪರಿಚಿತ ಬಂದೂಕುದಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಭಾರತೀಯ ಯುವಕ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. 

ಮೃತಪಟ್ಟ ಯುವಕನನ್ನು ಆಂಧ್ರಪ್ರದೇಶದ ಪೃಥ್ವಿರಾಜ್ ಕಂಡೆಪಿ ಎಂದು ಗುರುತಿಸಲಾಗಿದೆ ಎಂದು ಅಮೆರಿದಲ್ಲಿನ ಭಾರತೀಯ ರಾಯಭಾರಿ ಕಚೇರಿ ಮೂಲಗಳು ತಿಳಿಸಿವೆ. 

ಶುಕ್ರವಾರ ಬೆಳಗ್ಗೆ 9.10ರ ಸುಮಾರಿಗೆ ಅಪರಿಚಿತ ಯುವಕನೊಬ್ಬ  ಬಂದೂಕು ಹಿಡಿದು ಬ್ಯಾಂಕ್‌ ಆವರಣಕ್ಕೆ ನುಗ್ಗಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಮೂವರು ಗುಂಡಿಗೆ ಬಲಿಯಾಗಿದ್ದು ಐದು ಜನರು ಗಾಯಗೊಂಡಿದ್ದಾರೆ ಎಂದು ಚಿಂಚಿನಾಟಿ ಪೊಲೀಸರು ತಿಳಿಸಿದ್ದಾರೆ. 

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ದುಷ್ಕರ್ಮಿಯನ್ನು ಹತ್ಯೆ ಮಾಡಿದ್ದಾರೆ. ಈತ  ಘಟನೆ ನಡೆದಿರುವ ಬ್ಯಾಂಕಿ ಉದ್ಯೋಗಿ ಅಲ್ಲ ಎಂಬುದನ್ನು ಪೊಲೀಸರು ಖಚಿತ‍ಪಡಿಸಿದ್ದಾರೆ. 

ಶೂಟೌಟ್‌ ನಡೆಸಿದ ದುಷ್ಕರ್ಮಿಯ ಬಳಿ ಇದ್ದ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನ ಗುರುತು ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮೃತ ಭಾರತೀಯ ಯುವಕನ ಪಾರ್ಥೀವ ಶರೀರವನ್ನು ಭಾರತಕ್ಕೆ ತರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ರಾಯಭಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !