ಬುಧವಾರ, ನವೆಂಬರ್ 20, 2019
27 °C

ಸೌದಿ ಅರೇಬಿಯಾ: ಭೀಕರ ಬಸ್‌ ಅಪಘಾತದಲ್ಲಿ 35 ವಿದೇಶಿಯರು ಸಾವು

Published:
Updated:

ರಿಯಾದ್: ಸೌದಿ ಅರೇಬಿಯಾದ ಮದಿನಾ ಬಳಿ ಸಂಭವಿಸಿದ ಭೀಕರ ಬಸ್‌ ಅಪಘಾತದಲ್ಲಿ 35 ವಿದೇಶಿಯರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮ ಗುರುವಾರ ಬೆಳಿಗ್ಗೆ ವರದಿ ಮಾಡಿದೆ. ಬುಧವಾರ ಘಟನೆ ಸಂಭವಿಸಿದೆ.

‘ಮದಿನಾದ ಅಲ್–ಅಖಲ್ ಎಂಬಲ್ಲಿ ಬೃಹತ್ ಗಾತ್ರದ ಯಂತ್ರವೊಂದಕ್ಕೆ ಖಾಸಗಿ ಬಸ್ ಡಿಕ್ಕಿಯಾಗಿದೆ. ಪರಿಣಾಮವಾಗಿ 35 ವಿದೇಶಿಯರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸಮೀಪದ ಅಲ್–ಹಮ್ಮಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಮದಿನಾ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಮೃತರಲ್ಲಿ ಹೆಚ್ಚಿನವರು ಅರಬ್ ಮತ್ತು ಏಷ್ಯಾ ರಾಷ್ಟ್ರಗಳ ಯಾತ್ರಿಕರು ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)