ಗುರುವಾರ , ನವೆಂಬರ್ 21, 2019
24 °C

ಟ್ರಕ್‌ನಿಂದ 41 ಮಂದಿ ವಲಸಿಗರ ರಕ್ಷಣೆ

Published:
Updated:

ಥೆಸಲೊನಿಕಿ: ಉತ್ತರ ಗ್ರೀಸ್‌ನಲ್ಲಿ ಶಿಥಲೀಕರಣ ವ್ಯವಸ್ಥೆ ಇದ್ದ ಟ್ರಕ್‌ನಿಂದ 41 ಮಂದಿ ವಲಸಿಗರನ್ನು ಪೊಲೀಸರು ಸೋಮವಾರ ರಕ್ಷಣೆ ಮಾಡಿದ್ದಾರೆ.

‘ಅಫ್ಗಾನಿಸ್ತಾನ ಮೂಲದ ವಲಸಿಗರನ್ನು ರಕ್ಷಣೆ ಮಾಡಲಾಗಿದ್ದು, ಟ್ರಕ್‌ ಚಾಲಕನನ್ನು ಬಂಧಿಸಲಾಗಿದೆ. ವಲಸಿಗರ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಇವರಲ್ಲಿ ಏಳು ಮಂದಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪುರುಷರು ಮತ್ತು ಬಾಲಕರು ಈ ಟ್ರಕ್‌ನಲ್ಲಿದ್ದು ಶೀಘ್ರ ಅವರ ಗುರುತು ಪತ್ತೆ ಹಚ್ಚಲಾಗುವುದು‘ ಎಂದಿದ್ದಾರೆ.

ಬ್ರಿಟನ್‌ನಲ್ಲಿ ಕಳೆದ ತಿಂಗಳು ಶಿಥಲೀಕರಣ ವ್ಯವಸ್ಥೆ ಇದ್ದ ಟ್ರಕ್‌ನಲ್ಲಿ 39 ಮಂದಿಯ ಮೃತದೇಹ ಪತ್ತೆಯಾಗಿತ್ತು. ಅನಂತರ ಅಕ್ರಮ ವಲಸಿಗರು ಸಾಗುವ ಯೂರೋಪ್‌ ದೇಶಗಳ ಮಾರ್ಗಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿತ್ತು.

ಪ್ರತಿಕ್ರಿಯಿಸಿ (+)