ಮಂಗಳವಾರ, ಆಗಸ್ಟ್ 20, 2019
22 °C

ಚಂದ್ರನ ಮೇಲಿನ ಹೆಜ್ಜೆಗೆ 50 ವರ್ಷ

Published:
Updated:
Prajavani

ವಾಷಿಂಗ್ಟನ್‌: ಚಂದಿರನ ಅಂಗಳದಲ್ಲಿ ಮಾನವ ಪದಾರ್ಪಣೆ ಮಾಡಿದ ಗಳಿಗೆ, ಸಾಧನೆಗೆ ಈಗ ಐವತ್ತು ವರ್ಷ. 50 ವರ್ಷಗಳ ಹಿಂದೆ ಅಮೆರಿಕದ ಗಗನಯಾತ್ರಿ ನೀಲ್‌ ಅರ್ಮ್‌ಸ್ಟ್ರಾಂಗ್‌, ಬಝ್ ಅಲ್‌ಡ್ರಿನ್‌ ಮೊದಲಿಗೆ ಚಂದ್ರನ ಮೇಲೆ ಹೆಜ್ಜೆಇಟ್ಟರು.

1969ರ ಜುಲೈ 20, ‘ಅಪೊಲೊ 11’ ಹೆಸರಿನ ಬಾಹ್ಯಾಕಾಶ ನೌಕೆಯಿಂದ ಚಂದ್ರನಂಗಳದಲ್ಲಿ ಮನುಷ್ಯ ಹೆಜ್ಜೆ ಇಡುವ ಕಪ್ಪು–ಬಿಳುಪಿನ ಆ ಚಿತ್ರವನ್ನು ಜನರು ಕಣ್ತುಂಬಿಕೊಂಡಿ ದ್ದರು. ನೌಕೆಯು ಚಂದ್ರನ ಅಂಗಳ ತಲುಪಿದ ಆರು ಗಂಟೆ ಬಳಿಕ ಅರ್ಮ್‌ ಸ್ಟ್ರಾಂಗ್‌ ಎಡ ಪಾದವನ್ನು ಇರಿಸಿದ್ದರು.

ಇವರ ನಂತರ ಎರಡನೆಯವರಾಗಿ ಬಝ್‌ ಅಲ್‌ಡ್ರಿನ್‌ ಕೂಡಾ ಚಂದ್ರನ ಅಂಗಳದಲ್ಲಿ ಕಾಲಿಟ್ಟರು. ಇಬ್ಬರ ಜೊತೆಗಿದ್ದ ಮತ್ತೊಬ್ಬ ಗಗನಯಾತ್ರಿ ಮೈಕಲ್‌ ಕಾಲಿನ್ಸ್ ನೌಕೆಯಲ್ಲಿಯೇ ಉಳಿದುಕೊಂಡಿದ್ದರು.

Post Comments (+)