ರಾವಿ ನದಿಯಲ್ಲಿ ಕುಲದೀಪ್‌ ಚಿತಾಭಸ್ಮ ವಿಸರ್ಜನೆ

7

ರಾವಿ ನದಿಯಲ್ಲಿ ಕುಲದೀಪ್‌ ಚಿತಾಭಸ್ಮ ವಿಸರ್ಜನೆ

Published:
Updated:
Deccan Herald

ಲಾಹೋರ್‌: ಭಾರತದ ಹಿರಿಯ ಪತ್ರಕರ್ತ ಕುಲದೀಪ್‌ ನಯ್ಯರ್‌ ಅವರ ಚಿತಾಭಸ್ಮವನ್ನು ಅವರ ಮೊಮ್ಮಗಳು ಮಂದಿರಾ, ಇಲ್ಲಿನ ರಾವಿನದಿಯಲ್ಲಿ ವಿಸರ್ಜಿಸಿದರು.

ಬಳಿಕ ಪತ್ರಕರ್ತೆ ಮಂದಿರಾ ಅವರು ಲಾಹೋರ್‌ ಪ್ರೆಸ್‌ಕ್ಲಬ್‌ಗೆ ತೆರಳಿ, ಗೌರವ ಸದಸ್ಯತ್ವವನ್ನು ಸ್ವೀಕರಿಸಿದರು. ನಯ್ಯರ್‌ ಅವರಿಗೂ ಪ್ರೆಸ್‌ ಕ್ಲಬ್‌ ಗೌರವ ಸದಸ್ಯತ್ವ ನೀಡಿತ್ತು.

ಆಗಸ್ಟ್‌ 23ರಂದು ನವದೆಹಲಿಯಲ್ಲಿ ಕುಲ್‌ದೀಪ್‌ ಅವರು ನಿಧನರಾಗಿದ್ದರು.

ಸ್ಪ್ಯಾನಿಶ್‌ ಗಾಯಕಿ ಕ್ಯಾಬೆಲ್ಲಾ ಇನ್ನಿಲ್ಲ

ಬಾರ್ಸಿಲೋನಾ (ಎಪಿ): ಸ್ಪ್ಯಾನಿಶ್‌ನ ಖ್ಯಾತ ಸಂಗೀತಗಾರ್ತಿ ಮಾಂಟ್‌ಸೆರ್ರಟ್‌ ಕ್ಯಾಬೆಲ್ಲಾ ಅವರು ಇಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಶನಿವಾರ ಬೆಳಿಗ್ಗೆ ಇಲ್ಲಿನ ಸಾನ್‌ ಪಾವ್‌ ಆಸ್ಪ‍ತ್ರೆಯಲ್ಲಿ ಸಾವನ್ನಪ್ಪಿದರು ಎಂದು ಆಸ್ಪತ್ರೆಯ ನಿರ್ದೇಶಕ ಅಬ್ರಹಾಂ ಡೆಲ್‌  ತಿಳಿಸಿದರು.

ಪಿತ್ತಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಸೆಪ್ಟೆಂಬರ್‌ನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇವರ ನಿಧನಕ್ಕೆ ಪ್ರಧಾನಿ ಪೆಡ್ರೊ ಸಂಕೇಜ್ ಅವರು ಕಂಬನಿ ಮಿಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !