ದಕ್ಷಿಣ ಕೆರೋಲಿನಾದಲ್ಲಿ ಗುಂಡಿನ ದಾಳಿ: ಒಬ್ಬರ ಸಾವು

7

ದಕ್ಷಿಣ ಕೆರೋಲಿನಾದಲ್ಲಿ ಗುಂಡಿನ ದಾಳಿ: ಒಬ್ಬರ ಸಾವು

Published:
Updated:
Deccan Herald

ಫ್ಲಾರೆನ್ಸ್‌ (ಎಪಿ): ವ್ಯಕ್ತಿಯೊಬ್ಬರು ನಡೆಸಿದ ಗುಂಡಿನ ದಾಳಿಗೆ  ಪೊಲೀಸ್‌ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಏಳು ಮಂದಿ ಅಧಿಕಾರಿಗಳು ಗಾಯಗೊಂಡಿದ್ದಾರೆ. 

ದಕ್ಷಿಣ ಕೆರೋಲಿನಾದ ವಿಂಟೇಜ್‌ ಪ್ಲೇಸ್‌ನಲ್ಲಿರುವ ವ್ಯಕ್ತಿಗೆ ವಾರಂಟ್‌ ಜಾರಿಮಾಡಲು ಬುಧವಾರ ಮಧ್ಯಾಹ್ನ ಪೊಲೀಸರ ತಂಡ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಮೃತ ಅಧಿಕಾರಿಯನ್ನು ಡಾರ್ಲಿಂಗ್ಟನ್‌ನ ಕೆರ್ರವೇ ಎಂದು ಗುರುತಿಸಲಾಗಿದೆ.

‘ಗುಂಡಿನ ದಾಳಿ ನಡೆಸಿದ ವ್ಯಕ್ತಿಯೂ ಎರಡು ಗಂಟೆಗಳ ಕಾಲ ಮಕ್ಕಳನ್ನು ವಶದಲ್ಲಿರಿಸಿಕೊಂಡಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಕ್ಕಳನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿ, ಶಂಕಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ’ ಎಂದು ಫ್ಲಾರೆನ್ಸ್‌ ಕಂಟ್ರಿ ಪೊಲೀಸ್‌ ವಿಭಾಗದ ಮುಖ್ಯಸ್ಥ ಶೆರಿಫ್ ಮಾಜ್‌ ಮೈಕ್‌ ತಿಳಿಸಿದ್ದಾರೆ.

ತೀವ್ರ ಪ್ರವಾಹದಿಂದ ತತ್ತರಿಸಿರುವ ಕೆರೋಲಿನಾದಲ್ಲಿ ಇಂತಹ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ.

ಯಾವ ಕಾರಣಕ್ಕಾಗಿ ವ್ಯಕ್ತಿಗೆ ವಾರಂಟ್‌ ನೀಡಲಾಗಿತ್ತು ಎಂಬ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಅಲ್ಲದೇ ಗಾಯಗೊಂಡ ಅಧಿಕಾರಿಯ ಹೆಸರನ್ನು ಬಹಿರಂಗಗೊಳಿಸಿಲ್ಲ.

 

 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !