ಸವಾಲಿನ ಗುಹೆಯಿಂದ 8 ಬಾಲಕರ ರಕ್ಷಣೆ

7

ಸವಾಲಿನ ಗುಹೆಯಿಂದ 8 ಬಾಲಕರ ರಕ್ಷಣೆ

Published:
Updated:

ಮಾ ಸೈ, ಥಾಯ್ಲೆಂಡ್ (ಪಿಟಿಐ/ಎಪಿ/ರಾಯಿಟರ್ಸ್): ಇಲ್ಲಿನ ಥಾಮ್ ಲುವಾಗ್ ಗುಹೆಯೊಳಗೆ ಎರಡು ವಾರಗಳಿಂದ ಸಿಲುಕಿರುವ ಫುಟ್‌ಬಾಲ್‌ ತಂಡದ 12 ಬಾಲಕರು ಹಾಗೂ ಒಬ್ಬ ತರಬೇತುದಾರನ ರಕ್ಷಣಾ ಕಾರ್ಯವು ಇಡೀ ಜಗತ್ತಿನ ಗಮನ ಸೆಳೆದಿದೆ. ದೇಶ–ವಿದೇಶದ ತಜ್ಞರ ಸಹಾಯದಿಂದ ಭಾನುವಾರ ಹಾಗೂ ಸೋಮವಾರ ತಲಾ ನಾಲ್ವರನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಕಾರ್ಯಾಚರಣೆ ಮುಂದುವರಿದಿದೆ. 

ಥಾಮ್ ಲುವಾಗ್ ಗುಹೆ

4 ಕಿ.ಮೀಗುಹೆಯ ಉದ್ದ

ಪ್ರವೇಶ ದ್ವಾರ – ಬಾಲಕರು ಸಿಲುಕಿರುವ ಜಾಗ

1275 ಮೀಟರ್ ಬೆಟ್ಟದ ಎತ್ತರ 

***

ಅಂಕಿ–ಅಂಶ

13 ಗುಹೆಯೊಳಗೆ ತೆರಳಿದ್ದವರ ಸಂಖ್ಯೆ

8 ಈವರೆಗೆ ರಕ್ಷಣೆ ಮಾಡಿದವರ ಸಂಖ್ಯೆ

***

ಅಡ್ಡಿಯಾಗಿರುವ ಅಂಶಗಳು

* ಮಳೆ ಹಾಗೂ ಪ್ರವಾಹ ಹೆಚ್ಚುತ್ತಿದ್ದು, ಗುಹೆಯಲ್ಲಿ ನೀರಿನ ಮಟ್ಟ ದಿನೇ ದಿನೇ ಏರಿಕೆಯಾಗುತ್ತಿದೆ

* ಗುಹೆಯಲ್ಲಿ ಕಡಿಮೆಯಾಗುತ್ತಿರುವ ಆಮ್ಲಜನಕದ ಪ್ರಮಾಣ

* ಈ ಮಾರ್ಗದಲ್ಲಿ ಅಡ್ಡಿಯಾಗಿರುವ ಕಿರುದಾರಿ (ಪ್ಯಾಸೇಜ್)//

* 2 ಕಿ.ಮೀಟರ್‌ನಷ್ಟು ಮಾರ್ಗ ಸಂಪೂರ್ಣ ಕತ್ತಲು. ಈ ಕತ್ತಲಿನಲ್ಲಿಯೇ ಈಜಿಕೊಂಡು ಹೋಗಬೇಕು

* ಸಿಲುಕಿರುವ ಯಾರೊಬ್ಬರಿಗೂ ಸ್ಕೂಬಾ ಡೈವಿಂಗ್ ಅನುಭವ ಇಲ್ಲ

***
ಸಿಲುಕಿದ್ದು ಹೇಗೆ..

11ರಿಂದ 16 ವರ್ಷದ 12 ಬಾಲಕರು ಹಾಗೂ ಒಬ್ಬ ತರಬೇತುದಾರ, ಜೂನ್ 23ರಂದು ಮ್ಯಾನ್ಮಾರ್‌ ಗಡಿಯ ಗುಹೆ ಪ್ರವೇಶಿಸಿದ್ದರು. ಭಾರಿ ಮಳೆ ಬಂದಿದ್ದರಿಂದ ಅವರೆಲ್ಲ ಹೊರಬರಲಾರದೇ ಅಲ್ಲಿ ಸಿಲುಕಿಕೊಂಡರು. 10 ದಿನಗಳ ಶೋಧದ ಬಳಿಕ ನೀರು ತಾಗದ ಕಿರಿದಾದ ಜಾಗವೊಂದರಲ್ಲಿ ಈ ತಂಡ ಪತ್ತೆಯಾಗಿತ್ತು. ಗುಹೆಯಲ್ಲಿ ಪ್ರವಾಹದ ನೀರು ತುಂಬಿದ್ದರಿಂದ ಅವರನ್ನು ಹೊರತರುವ ಕೆಲಸಕ್ಕೆ ಅಡ್ಡಿಯಾಗಿತ್ತು. 

***

ಕಾರ್ಯಾಚರಣೆ ಹೀಗಿತ್ತು..
ಆಮ್ಲಜನಕ ಸಿಲಿಂಡರ್‌ಗಳ ಜೊತೆ ತಜ್ಞರು ಈಜಿಕೊಂಡು ಗುಹೆಯೊಳಗೆ ತೆರಳಿದ್ದರು. ಒಬ್ಬ ಬಾಲಕನಿಗೆ ಇಬ್ಬರು ಮುಳುಗುತಜ್ಞರು ಜೊತೆಯಾಗಿ, ಒಟ್ಟು ನಾಲ್ವರನ್ನು ಹೊರತಂದಿದ್ದರು. ವಾಪಸ್ ಬರುವಾಗ ಮಾರ್ಗದ ಗುರುತಿಗಾಗಿ ಹಗ್ಗವನ್ನು ಬಳಸಲಾಗಿತ್ತು. ಗುಹೆಯ ಚಿತ್ರಣ ಅರಿತಿದ್ದ ಕಾರಣ ಭಾನುವಾರ ರಕ್ಷಣೆಗೆ ತೆರಳಿದ್ದ ತಂಡವನ್ನೇ ಸೋಮವಾರ ಕಳುಹಿಸಲಾಗಿತ್ತು. ಕಾರ್ಯಾಚರಣೇಗೆ 3–4 ದಿನ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕಾರ್ಯಾಚರಣೆ ಶೀಘ್ರದಲ್ಲೇ ಮುಗಿಯುವ ಸಾಧ್ಯತೆಯಿದೆ. 

***

ರಕ್ಷಣಾ ತಂಡದಲ್ಲಿ...

ವಿದೇಶದ 13 ಮಂದಿ ಮುಳುಗುತಜ್ಞರು

ಖ್ಯಾತ ಮುಳುಗುತಜ್ಞ ರಿಚರ್ಡ್ ಹ್ಯಾರಿಸ್‌

ಐದು ಮಂದಿ ಥಾಯ್ ನೇವಿ ಸೀಲ್ ಸಿಬ್ಬಂದಿ

ಆಸ್ಟ್ರೇಲಿಯಾದ 19 ಯೋಧರು ಹಾಗೂ ಒಬ್ಬ ವೈದ್ಯ

**
‘ಖಾವೊ ಪಾಡ್ ಗ್ರಾಪೊ’ ಬೇಕು!

‘ನಮಗೆ ಹಸಿವಾಗುತ್ತಿದೆ. ತಿನ್ನಲು ಖಾವೊ ಪಾಡ್ ಗ್ರಾಪೊ ಬೇಕು!’ ಎಂದು ಗುಹೆಯಲ್ಲಿ ಸಿಲುಕಿದ್ದ ಬಾಲಕರು ರಕ್ಷಣಾ ಕಾರ್ಯಕರ್ತರಿಗೆ ಬೇಡಿಕೆಯಿಟ್ಟಿದ್ದರು. ಇದು ಥಾಯ್ಲೆಂಡ್‌ನ ಪ್ರಸಿದ್ಧ ಮಾಂಸಾಹಾರಿ ಖಾದ್ಯ. 

ಬರಹ ಇಷ್ಟವಾಯಿತೆ?

 • 26

  Happy
 • 2

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !