ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಒಂದೇ ಜಿಲ್ಲೆಯ 410 ಮಕ್ಕಳಲ್ಲಿ ಎಚ್‌ಐವಿ ಸೋಂಕು: ಪೋಷಕರ ಕಣ್ಣೀರು

Last Updated 17 ಮೇ 2019, 3:48 IST
ಅಕ್ಷರ ಗಾತ್ರ

ರಾಟಡೇರೋ (ಪಾಕಿಸ್ತಾನ):ಪಾಕಿಸ್ತಾನದ ಲರ್ಕಾನಾ ಜಿಲ್ಲೆಯಸುಮಾರು 410 ಮಕ್ಕಳಲ್ಲಿ ಕಳೆದ ಒಂದು ತಿಂಗಳಿಂದೀಚೆಗೆಎಚ್‌ಐವಿ ವೈರಸ್ ಪತ್ತೆಯಾಗಿರುವುದು ಪೋಷಕರಲ್ಲಿ ಭೀತಿ ಮೂಡಿಸಿದೆ. ಜ್ವರದಿಂದ ಬಳಲುತ್ತಿದ್ದಮಕ್ಕಳನ್ನು ರಕ್ತಪರೀಕ್ಷೆಗೆ ಒಳಪಡಿಸಿದಾಗ ಎಚ್‌ಐವಿ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ.ಮಕ್ಕಳ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿರುವ ಪೋಷಕರು ಆಸ್ಪತ್ರೆಗಳ ಎದುರು ಕಣ್ಣೀರಿಡುತ್ತಿದ್ದಾರೆ.

ಲರ್ಕಾನಾ ಜಿಲ್ಲೆಯಲ್ಲಿ ವ್ಯಾಪಕವಾಗಿ ಎಚ್‌ಐವಿ ಹರಡುತ್ತಿರುವ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಸಿಂಧ್ ಪ್ರಾಂತ್ಯದ ‘ಏಡ್ಸ್‌ ನಿಯಂತ್ರಣ ಕಾರ್ಯಕ್ರಮ’ದ ಅಧಿಕಾರಿಗಳು ಸುಮಾರು 13,800 ಜನರನ್ನು ತಪಾಸಣೆಗೆ ಒಳಪಡಿಸಿದರು. ಈ ಸಂದರ್ಭ 410 ಮಕ್ಕಳು ಮತ್ತು 100 ವಯಸ್ಕರಲ್ಲಿ ಎಚ್‌ಐವಿ ಪಾಸಿಟಿವ್ ಇರುವುದು ಪತ್ತೆಯಾಯಿತು.

ಸಿಂಧ್ ಪ್ರಾಂತ್ಯದಲ್ಲಿ ಎಚ್‌ಐವಿ ಹರಡಲು ಸಿರಂಜ್‌ಗಳ ಅವೈಜ್ಞಾನಿಕ ಬಳಕೆಯೇ ಕಾರಣ ಎಂದು ಪಾಕಿಸ್ತಾನದ ಆರೋಗ್ಯ ಸಚಿವಾಲಯ ಹೇಳಿದೆ. ಸ್ವತಃ ಎಚ್‌ಐವಿ ಸೋಂಕಿಂತರಾಗಿರುವ ಸ್ಥಳೀಯ ವೈದ್ಯ ಮುಝಾಫ್ಫರ್ ಘಂಘಾರೊ ಚಿಕಿತ್ಸೆ ನೀಡುವ ವೇಳೆಯಲ್ಲಿ ಅಜಾಗರೂಕತೆಯಿಂದ ನಡೆದುಕೊಂಡ ಕಾರಣ ಎಚ್‌ಐವಿ ವ್ಯಾಪಕವಾಗಿ ಹರಡಿತು ಎನ್ನುವುದು ಪಾಕ್ ಆರೋಗ್ಯ ಸಚಿವಾಲಯದ ವಿವರಣೆ.

ಇದೇ ಆರೋಪದ ಮೇಲೆ ಘಂಘಾರೋ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಅವರು ಉದ್ದೇಶಪೂರ್ವಕವಾಗಿ ಎಚ್‌ಐವಿ ವೈರಸ್ ಹರಡಲು ಕಾರಣರಾದರೇ ಎಂಬುದು ಖಾತ್ರಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT