ಬುಧವಾರ, ನವೆಂಬರ್ 20, 2019
21 °C

ಅಫ್ಗಾನಿಸ್ತಾನ: ಬಾಂಬ್‌ ದಾಳಿ ಮೂವರು ಬಲಿ

Published:
Updated:

ಜಲಾಲಾಬಾದ್‌, ಅಫ್ಗಾನಿಸ್ತಾನ: ಪೊಲೀಸ್‌ ಠಾಣೆಯನ್ನು ಗುರಿಯಾಗಿಸಿ ತಾಲಿಬಾನ್‌ ಉಗ್ರರು ನಡೆಸಿದ ಬಾಂಬ್‌ ದಾಳಿಯಲ್ಲಿ ಮೂವರು ಮೃತಪ‍ಟ್ಟಿದ್ದು, 20 ಮಕ್ಕಳು ಸೇರಿದಂತೆ 27 ಮಂದಿ ಗಾಯಗೊಂಡಿದ್ದಾರೆ. 

ಈಶಾನ್ಯ ಲಾಗ್‌ಮಾನ್‌ ಪ್ರಾಂತ್ಯದಲ್ಲಿರುವ ಆಲಿಶಿಂಗ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಬುಧವಾರ ಬೆಳಿಗ್ಗೆ ಘಟನೆ ಸಂಭವಿಸಿದೆ.

ಮೃತರಲ್ಲಿ ಇಬ್ಬರು ಯೋಧರು ಸೇರಿದ್ದಾರೆ. ಠಾಣೆಯ ಸಮೀಪದಲ್ಲಿದ್ದ ಧಾರ್ಮಿಕ ಶಾಲೆ ಭಾಗಶಃ ಧ್ವಂಸಗೊಂಡಿದೆ.

ಉಗ್ರರು ಟ್ರಕ್‌ ಬಳಸಿ ದಾಳಿ ನಡೆಸಿದ್ದರು ಎಂದು ಇಲ್ಲಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)