ಅಫ್ಗಾನಿಸ್ತಾನ: ಚಿನ್ನದ ಗಣಿ ಕುಸಿದು 30 ಜನ ಸಾವು

7

ಅಫ್ಗಾನಿಸ್ತಾನ: ಚಿನ್ನದ ಗಣಿ ಕುಸಿದು 30 ಜನ ಸಾವು

Published:
Updated:

ಕೊಹಿಸ್ತಾನ್‌: ಅಫ್ಗಾನಿಸ್ತಾನದ ಬದಖಷಾನ ಪ್ರಾಂತ್ಯದ ಕೊಹಿಸ್ತಾನ್‌ ಜಿಲ್ಲೆಯ ಚಿನ್ನದ ಗಣಿಯಲ್ಲಿ ಭಾನುವಾರ ಕುಸಿತ ಉಂಟಾಗಿದ್ದು, 30 ಜನ ಮೃತಪಟ್ಟಿದ್ದು, 15 ಜನ ಗಾಯಗೊಂಡಿದ್ದಾರೆ. 

ಗ್ರಾಮಸ್ಥರು ಚಿನ್ನ ಹುಡುಕುವ ಸಲುವಾಗಿ ನದಿ ತೀರದ ಉದ್ದಕ್ಕೂ ಸುಮಾರು 200 ಅಡಿ ಆಳದ ವರೆಗೆ ಅಗೆದಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಗ್ರಾಮಸ್ಥರು ಗಣಿ ಒಳಗೆ ಇಳಿದಾಗ ಮಣ್ಣು ಕುಸಿದು ಈ ಅವಘಡ ನಡೆದಿದೆ.

ಗ್ರಾಮಸ್ಥರು ವೃತ್ತಿರಪ ಗಣಿ ಕೆಲಸಗಾರರಲ್ಲ ಎಂದು ಪ್ರಾಂತೀಯ ಗವರ್ನರ್‌ ವಕ್ತಾರ ನಿಕ್‌ ಮೊಹಮ್ಮದ್‌ ನಝೀರ್‌ ಹೇಳಿದ್ದಾರೆ.

ಸ್ಥಳೀಯ ಗ್ರಾಮಸ್ಥರು ದಶಕಗಳಿಂದ ಸರ್ಕಾರದ ನಿಯಂತ್ರಣವಿಲದೆ ವ್ಯವಹಾರದಲ್ಲಿ ತೊಡಗಿದ್ದಾರ ಎಂದು ಅವರು ತಿಳಿಸಿದ್ದಾರೆ.

ಸ್ಥಳಕ್ಕೆ ರಕ್ಷಣಾ ತಂಡಳು ತೆರಳಿದ್ದು, ಸ್ಥಳೀಯರು ಈಗಾಗಲೇ ಕುಸಿದಿರುವ ಮಣ್ಣು ತೆರವು ಕಾರ್ಯದಲ್ಲಿ ತೊಡಿಗಿದ್ದಾರೆ. 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !