ಶನಿವಾರ, ಆಗಸ್ಟ್ 8, 2020
22 °C

ಅಮೆರಿಕಾದಲ್ಲಿ ಭೀಕರ ಬಿರುಗಾಳಿ -ಆರು ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕಾ (ಒಕ್ಲಹಮ): ಭೀಕರ ಬಿರುಗಾಳಿ ಹಾಗೂ ಪ್ರವಾಹಕ್ಕೆ ಸಿಲುಕಿ ಆರು ಮಂದಿ ಮೃತಪಟ್ಟಿರುವ ಘಟನೆ ಅಮೆರಿಕಾದ ಒಕ್ಲಹಮ ನಗರದಲ್ಲಿ ಸಂಭವಿಸಿದೆ.

ಕಳೆದ ಎರಡು ದಿನಗಳಿಂದ ತೀವ್ರ ಬಿರುಗಾಳಿ ಬೀಸಿದ ಪರಿಣಾಮ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಗರದಲಲ್ಲಿ  ಹಲವರು ಮೊಬೈಲ್ ಹೋಮ್‌‌ಗಳಲ್ಲಿ ವಾಸಿಸುತ್ತಿದ್ದರು. ಪಾರ್ಕ್ ಒಂದರ ಸಮೀಪ ಇದ್ದ ಮನೆಯೊಂದು ಭೀಕರ ಬಿರುಗಾಳಿಗೆ ಸಿಲುಕಿ ಅದರಲ್ಲಿದ್ದ 58 ವರ್ಷದ ವ್ಯಕ್ತಿ ಹಾಗೂ 56 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಮೇಯರ್ ವೈಟ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಕಡಿಮೆ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಆದರೆ, ಭಾನುವಾರ ತೀವ್ರ ಸ್ವರೂಪದ ಬಿರುಗಾಳಿ ಬೀಸಿ ಪರಿಣಾಮ ಹೆಚ್ಚಿನ ಪ್ರಮಾಣದ ನಷ್ಟ ಹಾಗೂ ಸಾವು ಸಂಭವಿಸಲು ಕಾರಣವಾಗಿದೆ ಎನ್ನಲಾಗಿದೆ. ಸ್ಥಳೀಯ ಸರ್ಕಾರ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಇಡೀ ನಗರವೇ ಅಸ್ತವ್ಯಸ್ತವಾಗಿದೆ ಎಂದು ಮೇಯರ್ ತಿಳಿಸಿದ್ದಾರೆ.

ಈ ನಗರದಲ್ಲಿ ತೈಲ ಬಾವಿಗಳಿದ್ದು, ಇವುಗಳಿಗೂ ಸಾಕಷ್ಟು ಹಾನಿಯುಂಟಾಗಿದೆ. ಇಎಫ್ -3 ಎಂಬ ಹೆಸರಿನ ಬಿರುಗಾಳಿ ಸುರಳಿಯಾಕಾರದಲ್ಲಿ ಸುತ್ತುತ್ತಲೆ ಹಲವು ಮನೆಗಳು ಹಾಗೂ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿದೆ. ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಮನೆಗಳು, ಅಂಗಡಿಗಳು ಎಲ್ಲವೂ ನಾಶವಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ ಎಂದು ಎಂದು ಮೈಯರ್ ವೈಟ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು