ಶುಕ್ರವಾರ, ಡಿಸೆಂಬರ್ 13, 2019
26 °C
19 ಲಕ್ಷ ಅಸ್ಸಾಂ ನಾಗರಿಕರು ಪೌರತ್ವದಿಂದ ವಂಚಿತ

ಎನ್‌ಆರ್‌ಸಿಗೆ ಅಮೆರಿಕದ ಧಾರ್ಮಿಕ ಆಯೋಗ ಆಕ್ಷೇಪ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಸ್ಸಾಂನಲ್ಲಿ ಕೈಗೊಂಡಿದ್ದ ರಾಷ್ಟ್ರೀಯ ಪೌರತ್ವ ನೋಂದಣಿಗೆ (ಎನ್‌ಆರ್‌ಸಿ) ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್‌ಸಿಐಆರ್‌ಎಫ್‌) ಆಕ್ಷೇಪ ವ್ಯಕ್ತಪಡಿಸಿದೆ.

ಅಸ್ಸಾಂನ ಸುಮಾರು 19 ಲಕ್ಷ ನಾಗರಿಕರು ತಮ್ಮ ಪೌರತ್ವ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಪಾರದರ್ಶಕ, ನ್ಯಾಯಸಮ್ಮತದ ಎನ್‌ಆರ್‌ಸಿ ಕೈಗೊಳ್ಳದ ಪರಿಣಾಮ ನಾಗರಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

‘ಮುಸ್ಲಿಂ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಎನ್‌ಆರ್‌ಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಸ್ಸಾಂನಿಂದ ಮುಸ್ಲಿಮರನ್ನು ಹೊರದಬ್ಬಬೇಕು ಎನ್ನುವ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದೆ’ ಎಂದು ಆಯೋಗದ ಕಮಿಷನರ್‌ ಅನುರಿಮಾ ಭಾರ್ಗವ್‌ ತಿಳಿಸಿದ್ದಾರೆ.

‘ಈಗ ಎನ್‌ಆರ್‌ಸಿಯನ್ನು ಭಾರತದಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ. ಈ ಮೂಲಕ ವಿವಿಧ ರೀತಿಯ ಪೌರತ್ವ ನೀಡುವ ಹುನ್ನಾರ ನಡೆಸಲಾಗುತ್ತಿದೆ’ ಎಂದು ದೂರಿದ್ದಾರೆ.

‘ಎನ್‌ಆರ್‌ಸಿಯಂತಹ ಕ್ರಮಗಳಿಂದ ಜನರು ಪೌರತ್ವಕ್ಕಾಗಿ ಧಾರ್ಮಿಕ ಪರೀಕ್ಷೆಗೆ ಒಳಗಾಗಬೇಕಾಗಿದೆ. ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಎಲ್ಲ ಅಲ್ಪಸಂಖ್ಯಾತ ಧರ್ಮದವರ ಹಕ್ಕುಗಳನ್ನು ಗೌರವಿಸಬೇಕು’ ಎಂದು ಯುಎಸ್‌ಸಿಆರ್‌ಎಫ್‌ ಅಧ್ಯಕ್ಷ ಟೋನಿ ಪರ್ಕಿನ್ಸ್‌ ಒತ್ತಾಯಿಸಿದ್ದಾರೆ.

ಆಗಸ್ಟ್‌ 31ರಂದು ಎನ್‌ಆರ್‌ಸಿಯ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)