ಶನಿವಾರ, ಜೂಲೈ 11, 2020
29 °C

10 ಲಕ್ಷಕ್ಕೂ ಅಧಿಕ ಅಮೆರಿಕ ಪ್ರಜೆಗಳ ಪರೀಕ್ಷೆ ಮಾಡಲಾಗಿದೆ: ಡೊನಾಲ್ಡ್‌ ಟ್ರಂಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಹತ್ತು ಲಕ್ಷಕ್ಕೂ ಅಧಿಕ ಅಮೆರಿಕ ಪ್ರಜೆಗಳಲ್ಲಿ ಕೊರೊನಾ ಸೋಂಕು ಪರೀಕ್ಷೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ. 

ಮಾಧ್ಯಮಗಳನ್ನು ಉದ್ದೇಶಿಸಿ ಶ್ವೇತಭವನದಲ್ಲಿ ಮಾತನಾಡಿರುವ ಅವರು, 'ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಈಗ ನಾಗರಿಕ ಮೇಲೆ ಹೇರಿರುವ ನಿಯಮಗಳು ಇನ್ನಷ್ಟು ಕಠಿಣಗೊಳ್ಳಬಹುದು. ಚೀನಾ ಮತ್ತು ಯುರೋಪಿನೊಂದಿಗೆ ಪ್ರಯಾಣ ನಿರ್ಬಂಧಗಳು ಜಾರಿಯಲ್ಲಿರುತ್ತವೆ' ಎಂದು ಟ್ರಂಪ್‌ ಹೇಳಿದ್ದಾರೆ.

ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಸಂಪೂರ್ಣ ಸಹಾಯ ನೀಡುವಂತೆ ಅಮೆರಿಕ ಪ್ರಜೆಗಳಲ್ಲಿ ಅವರು ಮನವಿ ಮಾಡಿದ್ದಾರೆ.

'ಈಗಾಗಲೇ 10 ಲಕ್ಷಕ್ಕೂ ಅಧಿಕ ಅಮೆರಿಕ ಪ್ರಜೆಗಳ ಪರೀಕ್ಷೆ ನಡೆಸಿದ್ದು, ಇದು ಮೈಲುಗಲ್ಲು' ಎಂದು ಅವರು ಪ್ರತಿಪಾದಿಸಿದ್ದಾರೆ.

'ಏಪ್ರಿಲ್‌ ಕೊನೆಯವರೆಗೂ 10ಕ್ಕಿಂತ ಹೆಚ್ಚ ಜನರು ಗುಂಪುಗೂಡಬಾರದು. ರೆಸ್ಟೋರೆಂಟ್‌ಗಳು ಅಥವಾ ಬಾರ್‌ಗಳಲ್ಲಿ ಗುಂಪಾಗಿ ಸೇರಬಾರದು. ಆ ಮೂಲಕ ಕೊರೊನಾ ವೈರಸ್‌ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು' ಎಂದು ಟ್ರಂಪ್‌ ಹೇಳಿದ್ದಾರೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು