ಸೋಮವಾರ, ಸೆಪ್ಟೆಂಬರ್ 23, 2019
28 °C

ಬಿಡುಗಡೆ ಆಯ್ತು ಬಹುನಿರೀಕ್ಷಿತ ಐಫೋನ್‌ 11 ಸೀರಿಸ್‌

Published:
Updated:

ಕ್ಯುಪರ್ಟಿನೊ (ಅಮೆರಿಕ): ಆ್ಯಪಲ್‌ ಕಂಪನಿಯು ತನ್ನ ಬಹುನಿರೀಕ್ಷಿತ ಸುಧಾರಿತ ಆವೃತ್ತಿಯ ಐಫೋನ್‌ 11, ಐಫೋನ್‌ 11  ಪ್ರೊ ಮತ್ತು ಐಫೋನ್‌ 11 ಪ್ರೊ ಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಆ್ಯಪಲ್‌ ಕಂಪನಿಯ ಪ್ರಧಾನ ಕಚೇರಿಯಲ್ಲಿ ಸಿಇಒ ಟಿಮ್‌ ಕುಕ್‌, ಸುಧಾರಿತ ತಂತ್ರಜ್ಞಾನವಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದರು. 

ಇದೇ ವೇಳೆ ವೇಗದ ಪ್ರೊಸೆಸರ್‌ ಆ್ಯಪಲ್‌ ಎ13 ಬಯೋನಿಕ್‌ ಚಿಪ್‌, ಮ್ಯಾಕ್ ಲ್ಯಾಪ್‌ಟಾಪ್ ಮತ್ತು ಐಮ್ಯಾಕ್ ಸಿಸ್ಟಂಗಳಿಗೆ ನೂತನ ಮ್ಯಾಕ್ ಓಎಸ್ ಕ್ಯಾಟಲೀನ ಕಾರ್ಯಾಚರಣ ವ್ಯವಸ್ಥೆ ಹಾಗೂ ಐಪ್ಯಾಡ್‌ಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಐಪ್ಯಾಡ್ ಓಎಸ್ ಮತ್ತು ನೂತನ ಐಓಎಸ್ ವಾಚ್ ಅನ್ನೂ ಬಿಡುಗಡೆ ಮಾಡಲಾಯಿತು.

 

ಇದರಲ್ಲಿ ಹೊಸತೇನಿದೆ?

* ಐಫೋನ್‌ 11 ಸಿರೀಸ್‌ನಲ್ಲಿ ಉತ್ತಮ ಸಾಮರ್ಥ್ಯದ ಕ್ಯಾಮೆರಾವನ್ನು ನೀವು ಕಾಣಬಹುದು. ಐಫೋನ್ 11ನಲ್ಲಿ ಎರಡು ಕ್ಯಾಮೆರಗಳಿವೆ. ಉನ್ನತಮಟ್ಟದ ಕ್ಯಾಮೆರಾ ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್‌ಗಳಲ್ಲಿ ಅಲ್ಟ್ರಾವೈಡ್‌, ವೈಡ್‌ ಮತ್ತು ಟೆಲಿಫೋಟೊ ಕ್ಯಾಮೆರಾಗಳಿವೆ. 

* ಸ್ಮಾರ್ಟ್‌ಫೋನ್‌ಗಳಲ್ಲಿಯೇ ಉತ್ತಮ ಗುಣಮಟ್ಟದ ವಿಡಿಯೊ ಚಿತ್ರಿಕರಣ ವ್ಯವಸ್ಥೆ ಇದರಲ್ಲಿದೆ.  

*  ಮತ್ತುಷ್ಟ ವಿಸ್ತಾರ ರೇಂಜ್‌ನ ಫೇಷಿಯಲ್ ರೆಕಗ್ನಿಷನ್ ಸೌಲಭ್ಯ. 

* ಐಫೋನ್ 11 ಪ್ರೊ – 5.8 ಇಂಚಿನ ಡಿಸ್‌ಪ್ಲೇ

* ಐಫೋನ್ 11 ಪ್ರೊ ಮ್ಯಾಕ್ಸ್‌ – 6.5 ಇಂಚಿನ ಡಿಸ್‌ಪ್ಲೇ

ಐಫೋನ್ ಬೆಲೆ ವಿವರ

ಐಫೋನ್​ 11 ಪ್ರೊ​ನಲ್ಲಿ 3,190mAh ​ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದರ ಬೆಲೆ  ₹ 71,860  ಎಂದು ಅಂದಾಜಿಸಲಾಗಿದೆ. ಅಂತೆಯೇ ಐಫೋನ್​ 11 ಪ್ರೊ ಮ್ಯಾಕ್ಸ್​  3,500mAh​ ಬ್ಯಾಟರಿಯನ್ನು ನೀಡಲಾಗಿದ್ದು, ಈ ಫೋನ್​ ಬೆಲೆಯನ್ನು ₹79,050ಗೆ ಗ್ರಾಹಕರಿಗೆ ಸಿಗಲಿದೆ.

Post Comments (+)