ಶುಕ್ರವಾರ, ಜೂಲೈ 10, 2020
22 °C

ಕದನವಿರಾಮ: 'ಗುಟೆರಸ್‌ ಮನವಿ ಜಾಗತಿಕ' 

‌ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ‘ವಿಶ್ವಸಂಸ್ಥೆ ಮುಖ್ಯಸ್ಥ ಆಂಟೊನಿಯೊ ಗುಟೆರಸ್‌ ಅವರು ಕದನವಿರಾಮ ಪಾಲಿಸುವಂತೆ ಮಾಡಿರುವ ಮನವಿ ಜಾಗತಿಕವಾಗಿ ಅನ್ವಯವಾಗುತ್ತದೆ. ಗಡಿ ನಿಯಂತ್ರಣ ರೇಖೆ ಸೇರಿದಂತೆ ಎಲ್ಲೆಡೆ ಇದನ್ನು ಪಾಲಿಸಬೇಕು’ ಎಂದು ಅವರ ವಕ್ತಾರ ಸ್ಟಿಫಾನ್‌ ಡುಜಾರಿಕ್ ತಿಳಿಸಿದ್ದಾರೆ.

ಕೋವಿಡ್-‌19 ಪಿಡುಗಿನ ಈ ವೇಳೆಯಲ್ಲಿ ಜಾಗತಿಕ ಕದನವಿರಾಮಕ್ಕೆ ಗುಟೆರಸ್‌ ಅವರು ಕರೆ ನೀಡಿದರೂ ಪಾಕಿಸ್ತಾನ, ಭಾರತದ ಗಡಿಯಲ್ಲಿ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ ಕುರಿತ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ಪಾಕಿಸ್ತಾನದ ಸೇನೆ ಪೂಂಛ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಭಾರತೀಯ ಪ್ರಜೆಯನ್ನು ಹತ್ಯೆ ಮಾಡಿತ್ತು. ಭಾರತ ಇದನ್ನು ವಿರೋಧಿಸಿ ಶುಕ್ರವಾರ ಪಾಕಿಸ್ತಾನದ ಬಳಿ ಖಂಡನೆ ವ್ಯಕ್ತಪಡಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು