ಭೂಮಿಗೆ ಬಂದಿಳಿದ ಗಗನಯಾತ್ರಿಗಳು

7

ಭೂಮಿಗೆ ಬಂದಿಳಿದ ಗಗನಯಾತ್ರಿಗಳು

Published:
Updated:

ಮಾಸ್ಕೊ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಆರು ತಿಂಗಳಿಗೂ ಹೆಚ್ಚು ಕಾಲ ಇದ್ದ ಮೂವರು ಗಗನಯಾತ್ರಿಗಳು ಗುರುವಾರ ವಾಪಸ್‌ ಭೂಮಿಗೆ ಬಂದಿದ್ದಾರೆ.

ಅಮೆರಿಕದ ಸೆರೆನಾ ಔನೊನ್‌ ಚಾನ್ಸಲರ್‌, ರಷ್ಯಾದ ಸೆರ್ಗಿ ಪ್ರೊಕೊಪ್ಯೆವ್‌ ಮತ್ತು ಯರೋಪಿಯನ್‌ ಬಾಹ್ಯಾಕಾಶ ಸಂಸ್ಥೆಯ ಜರ್ಮನ್‌ನ ಅಲೆಕ್ಸಾಂಡರ್‌ ಗೆರ್ಸ್ಟ್‌ ಅವರು ಕಜಕಿಸ್ತಾನದ ಝೆಝ್ಕಾಝ್ಗಾನ್‌ನಲ್ಲಿ ಮಂಜು ಆವೃತವಾದ ಪ್ರದೇಶದಲ್ಲಿ ‘ಸೊಯುಜ್‌ ಎಂಎಸ್‌–09’ ಬಾಹ್ಯಾಕಾಶ ನೌಕೆ ಮೂಲಕ ಬಂದಿಳಿದರು.

‘ನಾವು ಆರೋಗ್ಯದಿಂದ ಇದ್ದೇವೆ’ ಎಂದು ಗಗನಯಾತ್ರಿಗಳು ಭೂಮಿಗೆ ಬಂದಿಳಿದ ತಕ್ಷಣ ರೇಡಿಯೊ ಸಂದೇಶ ನೀಡಿದರು.

ರಷ್ಯಾದ ರಕ್ಷಣಾ ತಂಡದ ಸದಸ್ಯರು ಹೆಲಿಕಾಪ್ಟರ್‌ನಲ್ಲಿ ಸ್ಥಳಕ್ಕೆ ಧಾವಿಸಿ ಗಗನಯಾತ್ರಿಗಳಿಗೆ ನೆರವಾದರು. ಸ್ಥಳದಲ್ಲೇ ಗಗನಯಾತ್ರಿಗಳ ಪ್ರಾಥಮಿಕ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು 197 ದಿನಗಳನ್ನು ಕಳೆದಿದ್ದಾರೆ. ಔನೊನ್‌ ಚಾನ್ಸಲರ್‌ ಮತ್ತು ಪ್ರೊಕೊಪ್ಯೆವ್‌ ಅವರಿಗೆ ಇದು ಮೊದಲನೇ ಬಾಹ್ಯಾಕಾಶ ಯಾತ್ರೆಯಾಗಿತ್ತು. ಗೆರ್ಸ್ಟ್‌ ಅವರಿಗೆ ಇದು ಎರಡನೇ ಯಾತ್ರೆಯಾಗಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !