ಸೋಮವಾರ, ಡಿಸೆಂಬರ್ 9, 2019
20 °C

ಪೂರ್ವ ಬಾಂಗ್ಲಾದಲ್ಲಿ ರೈಲು ಅಪಘಾತ: 15 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ: ಪೂರ್ವ ಬಾಂಗ್ಲಾದಲ್ಲಿ ಎರಡು ರೈಲುಗಳು ಮುಖಾಮುಖಿಯಾಗಿ ಕನಿಷ್ಠ 15 ಪ್ರಯಾಣಿಕರು ಮೃತಪಟ್ಟು, 58 ಜನರು ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಕಸ್ಬಾ ಪಟ್ಟಣದ ಮಂಡೋಲ್‌ಭಾಗ್‌ ರೈಲು ನಿಲ್ದಾಣದಲ್ಲಿ ಢಾಕಾ ಇಂಟರ್‌ಸಿಟಿ ಮತ್ತು ಚಿತ್ತಗಾಂಗ್‌ ರೈಲುಗಳ ನಡುವೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. 

‘ಅಪಘಾತದಲ್ಲಿ ಕನಿಷ್ಠ 15 ಜನ ಮೃತಪಟ್ಟಿದ್ದಾರೆ. 58 ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ’ ಎಂದು ಸ್ಥಳೀಯ ಪೊಲೀಸ್‌ ಮುಖ್ಯಸ್ಥ ಅನ್ಸೂರ್ ರೆಹಮಾನ್‌ ಹೇಳಿದ್ದಾರೆ.

ಅಪಘಾತದ ನಂತರ ಢಾಕಾ ನಿಲ್ದಾಣದಲ್ಲಿ ರೈಲು ಸೇವೆಗಳನ್ನು ನಿಲ್ಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗಾಯಾಳುಗಳ ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು