ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು ಭೀತಿ: ಬೀಜಿಂಗ್‌ ಈಗ ಭದ್ರಕೋಟೆ

Last Updated 14 ಏಪ್ರಿಲ್ 2020, 13:27 IST
ಅಕ್ಷರ ಗಾತ್ರ

ಬೀಜಿಂಗ್: ಕೊರೊನಾ ವೈರಸ್‌ ಸೋಂಕಿನ ಎರಡನೇ ಆಘಾತ ಅಪ್ಪಳಿಸಬಹುದು ಎಂಬ ಭೀತಿಯಿಂದ ಚೀನಾ ವಿದೇಶಿಯರು ಮತ್ತು ತನ್ನದೇ ದೇಶದ ವಿವಿಧ ಪ್ರಾಂತ್ಯಗಳ ಜನರು ಬೀಜಿಂಗ್ ಪ್ರವೇಶಿಸುವುದಕ್ಕೆಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದೆ.

ಕೋವಿಡ್-19 ಪಿಡುಗನ್ನು ಕಷ್ಟಪಟ್ಟುನಿಯಂತ್ರಣಕ್ಕೆ ತಂದಿರುವ ಚೀನಾ ವಿದೇಶಿಯರ ಭೇಟಿಯನ್ನು ನಿಷೇಧಿಸಿದೆ. ವಿದೇಶದಲ್ಲಿರುವ ಚೀನಾ ಮೂಲದವರಿಗೂ ಸ್ವದೇಶ ಭೇಟಿಗೆ ಅವಕಾಶ ಸಿಗುತ್ತಿಲ್ಲ. ಇದರ ಜೊತೆಗೆ ದೇಶದ ವಿವಿಧೆಡೆ ಇರುವವರು ರಾಷ್ಟ್ರ ರಾಜಧಾನಿಗೆ ಬರಬೇಕೆಂದರೆ ಸಾಕಷ್ಟು ನಿಬಂಧನೆಗಳನ್ನು ಪೂರೈಸಬೇಕಾದ ಅನಿವಾರ್ಯತೆ ಇದೆ.

ಬೀಜಿಂಗ್‌ಗೆ ಬರುವ ಯಾರೇ ಆದರೂ 14 ದಿನಗಳ ಕಟ್ಟುನಿಟ್ಟಿನ ಕ್ವಾರಂಟೈನ್‌ನಲ್ಲಿ ಇರಬೇಕು ಎಂಬ ಷರತ್ತು ವಿಧಿಸಲಾಗಿದೆ. ಅವರ ಪರೀಕ್ಷಾ ವರದಿ ನೆಗೆಟಿವ್ ಬಂದರೂ ಕ್ವಾರಂಟೈನ್ ನಿಯಮದಿಂದ ವಿನಾಯ್ತಿ ಸಿಗುವುದಿಲ್ಲ.

ಏಕಿಷ್ಟು ಕಟ್ಟುನಿಟ್ಟು

ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಪ್ರತಿ ವರ್ಷ ಮಾರ್ಚ್‌ನಲ್ಲಿ ನಡೆಯುತ್ತಿದ್ದನಡೆಯುವ 'ಟು ಸೆಷನ್ಸ್‌'ಕಾಂಗ್ರೆಸ್ (ಸಮಾವೇಶ) ಮುಂದೂಡಿದೆ. ಸಮಾವೇಶದಲ್ಲಿ ಪಾಲ್ಗೊಳ್ಳುವ ಸಾವಿರಾರು ಮಂದಿ ಪ್ರತಿಷ್ಠಿತರಿಗೆಸೋಂಕಿನ ಆತಂಕ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುವವರೆಗೆ ಸಮಾವೇಶ ನಡೆಸಲು ಆಗುವುದಿಲ್ಲ ಎಂದು ಕಮ್ಯುನಿಸ್ಟ್ ಪಕ್ಷವು ಹೇಳಿದೆ.

ಬೀಜಿಂಗ್‌ಗೆ ಹಿಂದಿರುತ್ತಿರುವ ಜನರ ಆರೋಗ್ಯ ಸರಿಯಿದೆ ಎಂದು ಖಾತ್ರಿಪಡಿಸಿಕೊಳ್ಳುವುದು ಈಗ ಅತಿಮುಖ್ಯ. ಇಲ್ಲದಿದ್ದರೆ ಟು ಸೆಷನ್ಸ್‌ ಆರಂಭವಾಗಲು ಪೂರಕ ವಾತಾವರಣ ನಿರ್ಮಿಸುವುದು ಅಸಾಧ್ಯ ಎನ್ನುತ್ತಾರೆ ರೆನ್‌ಮಿನ್ ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗದ ಪ್ರಾಧ್ಯಾಪಕಿ ಮಾ ಲಿಯಾಂಗ್.

ಬೀಜಿಂಗ್ ಜನರನ್ನು ಸೋಂಕಿನಿಂದ ಕಾಪಾಡಬೇಕು ಎನ್ನುವುದಕ್ಕಿಂತ ಕಮ್ಯುನಿಸ್ಟ್ ಪಕ್ಷದ ನಾಯಕರನ್ನು ಸೋಂಕಿನಿಂದ ರಕ್ಷಿಸಬೇಕು ಮತ್ತು ಸಾಧ್ಯವಾದಷ್ಟೂ ಬೇಗ ಸಮಾವೇಶ ನಡೆಸಬೇಕು ಎನ್ನುವುದೇ ಸರ್ಕಾರದ ಮುಖ್ಯ ಕಾಳಜಿಯಾಗಿದೆ ಎನ್ನುವುದು ಸಿಂಗಪುರದ ನ್ಯಾಷನಲ್ ವಿವಿಯ ಸಹಾಯಕ ಪ್ರಾಧ್ಯಾಪಕ ಅಲ್ಫ್ರೆಡ್ ವು ಅವರ ವಿಶ್ಲೇಷಣೆ.

ಕೇಂದ್ರ ಸರ್ಕಾರವುಅತಿಮುಖ್ಯ ನಾಯಕರ ರಕ್ಷಣೆಗೆ ಹೆಚ್ಚು ಗಮನಕೊಡುತ್ತಿದೆ. ಹೀಗಾಗಿ ಸಾಮಾನ್ಯ ಜನರು ಸಂಕಷ್ಟ ಅನುಭವಿಸಬೇಕಾಗಿದೆ ಎಂದು ಅವರು ಹೇಳುತ್ತಾರೆ.

ನಿಬಂಧನೆಗಳು ಹೀಗಿವೆ

ವಿದ್ಯಾರ್ಥಿಗಳು ಶಾಲೆಗಳಿಗೆ ಬರುವ ಮೊದಲು ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್‌ನಲ್ಲಿರುಬೇಕು. ಪರೀಕ್ಷಾ ವರದಿ ನೆಗೆಟಿವ್ ಬಂದರೆ ಮಾತ್ರ ಅವರಿಗೆ ಶಾಲೆಗೆ ಹೋಗಲು ಅವಕಾಶ ಸಿಗುತ್ತದೆ. ಹೋಟೆಲ್‌ಗಳಲ್ಲಿ ಉಳಿಯಲು ಬರುವ ಅತಿಥಿಗಳೂ ಅಷ್ಟೇ.7 ದಿನಗಳ ಒಳಗೆ ತಪಾಸಣೆಗೆ ಒಳಗಾಗಬೇಕು, ವರದಿನೆಗೆಟಿವ್ ಬಂದರೆ ಮಾತ್ರ ಉಳಿಯಲು ಅವಕಾಶ.

ಇಂಥ ಕ್ರಮಗಳನ್ನು ಜಾರಿಗೊಳಿಸಿರುವ ಕಾರಣ ವಿವಿಧೆಡೆ ವಾಸಿಸುತ್ತಿರುವ ಬೀಜಿಂಗ್ ನಿವಾಸಿಗಳು ಸ್ವಗೃಹಗಳಿಗೆ ಹಿಂದಿರುವುದನ್ನು ಮುಂದೂಡುತ್ತಿದ್ದಾರೆ.ಬೀಜಿಂಗ್‌ನ ತಮ್ಮ ಮನೆಗೆ ಹಿಂದಿರುಗಲು ಅಹ್ನುಯ್ ಪ್ರಾಂತ್ಯದ ಚೆನ್ ನಾ ಅವರಿಗೆ ಸಾಧ್ಯವಾಗಲೇ ಇಲ್ಲ. ಅವರಿದ್ದ ಪ್ರದೇಶವನ್ನು ಅತಿ ಅಪಾಯದ ಪ್ರದೇಶ ಎಂದು ಸರ್ಕಾರ ಘೋಷಿಸಿದೆ.

'ನಾನು ಎಲ್ಲಿಂದ ಬಂದಿದ್ದೇನೆ ಎಂದು ಅರ್ಥವಾದ ತಕ್ಷಣ ಅವರು ಮಾತನಾಡುವುದನ್ನು ನಿಲ್ಲಿಸುತ್ತಾರೆ. ನನಗೆ ಅಧಿಕಾರಿಗಳ ಭೇಟಿಯೂ ಸಾಧ್ಯವಾಗುತ್ತಿಲ್ಲ. ಫೆಬ್ರುವರಿಯಿಂದೀಚೆಗೆ ಕೆಲಸವಿಲ್ಲದೆ ಇದ್ದೇನೆ' ಎಂದು ಅವರು ಹೇಳಿದರು.

ವುಹಾನ್‌ ಅಂದ್ರೆ ಇನ್ನಷ್ಟು ಕಠಿಣ

ಕೊರೊನಾ ವೈರಸ್‌ ಮೊದಲ ಬಾರಿಗೆ ವರದಿಯಾದವುಹಾನ್‌ನಿಂದ ಬರುವವರಿಗೆ ಅತ್ಯಂತ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ.

ಏಪ್ರಿಲ್ 8ರಂದು ವುಹಾನ್ ನಗರದ ಮೇಲಿದ್ದ ಲಾಕ್‌ಡೌನ್ಸಡಿಲಿಸಲಾಯಿತು. ಆದರೆ ಇಂದಿಗೂನಗರದಿಂದ ಹೊರಗೆ ಹೋದವರು ವಾಪಸ್ ಬಂದ 7 ದಿನಗಳ ಒಳಗೆ ತಪಾಸಣೆಗೆ ಒಳಪಡಬೇಕು, ವಾಪಸ್ ಬಂದ ನಂತರ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕು. ಮತ್ತೊಮ್ಮೆ ಪರೀಕ್ಷೆಯಾಗಿ, ವರದಿ ನೆಗೆಟಿವ್ ಬಂದರೆ ಮಾತ್ರ ಅವರಿಗೆ ಮನೆಗಳಿಂದ ಹೊರಗೆ ಬರಲು ಅವಕಾಶ ಎಂಬ ನಿಬಂಧನೆಗಳನ್ನು ಮುಂದುವರಿಸಲಾಗಿದೆ.

ವುಹಾನ್‌ ನಗರ ಮತ್ತು ಹುಬೇ ಪ್ರಾಂತ್ಯದಇತರ ನಗರಗಳಿಗೆ ಬರುವವರು ವಿಶೇಷ ಮೊಬೈಲ್ ಆಪ್‌ನಲ್ಲಿಹಸಿರು ಕೋಡ್ ಮತ್ತು ನ್ಯೂಕ್ಲಿಕ್ ಆಸಿಡ್ ಟೆಸ್ಟ್‌ನಲ್ಲಿ ನೆಗೆಟಿವ್ ವರದಿ ತೋರಿಸಬೇಕು.

ಪರೀಕ್ಷಾ ವರದಿ ನೆಗೆಟಿವ್ ಬಂದ ನಂತರಬೀಜಿಂಗ್‌ಗೆ ಬರಲು ಇಚ್ಛಿಸುವವರು ಮೊದಲು ಆಪ್‌ನಲ್ಲಿ ವಿನಂತಿ ಕಳಿಸಬೇಕು. ಅನುಮತಿ ದೊರೆತ ನಂತರ ರೈಲು ಟಿಕೆಟ್ ಖರೀದಿಸಲು ಮತ್ತೊಂದು ವಿನಂತಿ ಕಳಿಸಬೇಕು. ದಿನಕ್ಕೆ ತಲಾ 1000 ಸೀಟ್‌ ಸಾಮರ್ಥ್ಯದ ಎರಡು ರೈಲುಗಳು ಪ್ರಸ್ತುತ ಬೀಚಿಂಗ್ ಮತ್ತು ಚೀನಾ ನಡುವೆ ಸಂಚರಿಸುತ್ತಿವೆ.

ನಾನು ಟಿಕೆಟ್‌ಗಳನ್ನು 12ನೇ ತಾರೀಖಿಗೆಂದು ಖರೀದಿಸಿದ್ದೆ. ವಾಪಸ್‌ಬರಲುನನಗೆ 7ರಂದು ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಸೂಚಿಸಲಾಯಿತು ಎಂದು ವುಹಾನ್ ನಿವಾಸಿ ಲ್ಯು ಶಿಯಿ ಹೇಳಿದರು. ಅವರು ಭಾನುವಾರ ಬೀಚಿಂಗ್‌ಗೆ ರೈಲಿನಲ್ಲಿ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT