ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್: ಸರ್ಕಾರ ರಚಿಸಲು ನೆತನ್ಯಾಹು ವಿಫಲ

ಅತಂತ್ರ ಚುನಾವಣಾ ಫಲಿತಾಂಶ, ಸಂಖ್ಯಾಬಲದ ಕೊರತೆ
Last Updated 22 ಅಕ್ಟೋಬರ್ 2019, 17:13 IST
ಅಕ್ಷರ ಗಾತ್ರ

ಜೆರುಸಲೇಂ: ಸಂಸತ್ತಿನಲ್ಲಿ ಅಗತ್ಯ ಸಂಖ್ಯಾಬಲ ಪಡೆಯಲು ಸಾಧ್ಯವಾಗದೇ ಇರುವುದರಿಂದ, ಅಂತಿಮ ಆದೇಶಕ್ಕಾಗಿ ಅಧ್ಯಕ್ಷ ರುವೆನ್ ರಿವ್ಲಿನ್ ಅವರನ್ನು ಸಂಪರ್ಕಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.

ಸೆಪ್ಟೆಂಬರ್ 17ರಂದು ಹೊರಬಂದ ಚುನಾವಣಾ ಫಲಿತಾಂಶ ಅತಂತ್ರವಾಗಿದ್ದರಿಂದ, ರಿವ್ಲಿನ್ ಅವರು ಸರ್ಕಾರ ರಚನೆಗೆ 28 ದಿನ ಗಡುವು ನೀಡಿದ್ದರು. ಗಡುವು ಮುಗಿಯುವ 2 ದಿನ ಮೊದಲು ನೆತನ್ಯಾಹು ಈ ವಿಷಯ ಬಹಿರಂಗಪಡಿಸಿದ್ದಾರೆ.

‘ನಿರ್ಣಯ ಕೈಗೊಳ್ಳುವ ಸಮಯ ಬಂದಿದೆ. ಬೆನ್ನಿ ಗಂಝ್ ನೇತೃತ್ವದಲ್ಲಿ ಸರ್ಕಾರ ರಚಿಸಲು ಪಕ್ಷ ಸಿದ್ಧವಾಗಿದೆ’ ಎಂದು ಬ್ಲ್ಯೂ ಆ್ಯಂಡ್ ವೈಟ್ ಪಕ್ಷ ಹೇಳಿಕೆ ಬಿಡುಗಡೆಗೊಳಿಸಿದೆ.

ಒಂದು ವೇಳೆ ಅಧ್ಯಕ್ಷರು ಪುನಃ ಸರ್ಕಾರ ರಚನೆಗೆ ಆದೇಶ ಹೊರಡಿಸಿದರೆ, 21 ದಿನಗಳ ಒಳಗಾಗಿ ಸರ್ಕಾರ ರಚನೆ ಆಗಬೇಕು. ಇಲ್ಲವಾದಲ್ಲಿ ಇಸ್ರೇಲ್‌ ಒಂದೇ ವರ್ಷದ ಅವಧಿಯಲ್ಲಿ ಮೂರನೇ ಚುನಾವಣೆ ಎದುರಿಸಲು ಸಿದ್ಧವಾಗಬೇಕಾಗುತ್ತದೆ.

ಸರ್ಕಾರ ರಚನೆಗೆ, 120 ಸದಸ್ಯ ಬಲದ ಸಂಸತ್ತಿನಲ್ಲಿ ಕನಿಷ್ಠ 61 ಸದಸ್ಯರ ಬೆಂಬಲ ಅಗತ್ಯ. ನೆತನ್ಯಾಹು ಅವರ ಪ್ರತಿಸ್ಪರ್ಧಿ ಬೆನ್ನಿ ಗಂಝ್ ಅವರು 54 ಸದಸ್ಯರ ಬೆಂಬಲ ಇರುವುದಾಗಿ ಹೇಳಿದ್ದರು. ಆದರೆ 55 ಸದಸ್ಯರ ಬೆಂಬಲ ಇದೆ ಎನ್ನುವ ಕಾರಣದಿಂದ ಸರ್ಕಾರ ರಚನೆ ಹೊಣೆಯನ್ನು ರಿವ್ಲಿನ್ ಅವರು ನೆತನ್ಯಾಹುಗೆ ನೀಡಿದ್ದರು.

‘ಸರ್ಕಾರ ರಚನೆ ಹೊಣೆ ದೊರಕಿದ ಬಳಿಕ ಈ ನಿಟ್ಟಿನಲ್ಲಿ ಒಮ್ಮತ ಮೂಡಿಸಲು ಸತತ ಯತ್ನಿಸಿದ್ದೇನೆ. ಆದರೆ ಮತ್ತೊಂದು ಚುನಾವಣೆ ತಪ್ಪಿಸುವ ನನ್ನ ಎಲ್ಲಾ ಯತ್ನಗಳು ವಿಫಲವಾದವು. ಗಂಝ್ ಅವರೊಂದಿಗೆ ಸಂಧಾನ ಮಾಡಿಕೊಳ್ಳಲು ಅವರ ಬ್ಲೂ ಆ್ಯಂಡ್‌ ವೈಟ್ ಪಕ್ಷವು ಸತತ ನಿರಾಕರಿಸಿದ್ದೇ ಇದಕ್ಕೆ ಕಾರಣ’ ಎಂದು ನೆತನ್ಯಾಹು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT